ಸಂಗ್ರೂರ್/ಚಂಡಿಗಢ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾರತೀಯ ಯೋಧರೊಬ್ಬರು ಮನಸೋಯಿಚ್ಛೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿ ಬಳಿಕ ತಾನು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾಲ್ವರು ಕುಟುಂಬಸ್ಥರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯೋಧನನ್ನು 25 ವರ್ಷದ ಜಗದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಗದೀಪ್ ಸಿಂಗ್ ತನ್ನ ಮನೆಯ ಮಹಡಿಗೆ ಹೋಗಿ ದಿಢೀರನೇ ಗುಂಡಿನ ದಾಳಿ ಆರಂಭಿಸಿದ. ಈ ದಾಳಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದಂತೆ 4 ಮಂದಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿರುವುದಾಗಿ ಚಂಡೀಗಢ ಪೊಲೀಸ್ ಮೂಲಗಳು ತಿಳಿಸಿವೆ.