ಕೊಲ್ಕತ್ತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಇರುವ ದಾಖಲೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಬಿಡುಗಡೆ ಮಾಡಿದ ನಂತರ ನೇತಾಜಿ ಬಗ್ಗೆ ಹಲವಾರು ವಿಷಯಗಳು ಒಂದರ ಹಿಂದೆ ಒಂದು ಎಂಬಂತೆ ಬಹಿರಂಗವಾಗುತ್ತಿದೆ.
ಇದೀಗ ಬಹಿರಂಗವಾದ ಸುದ್ದಿಯೆಂದರೆ ನೇತಾಜಿಯ ಮದುವೆಯದ್ದು. ಮಂಗಳವಾರ ‘ದ ಟೆಲಿಗ್ರಾಫ್’ ಪತ್ರಿಕೆಯಲ್ಲಿ ನೇತಾಜಿಯವರು ಜೆಕೋಸ್ಕಾವಾಕಿಯಾ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದು ಅದರಲ್ಲಿ ನೀಮಾ ಎಂಬ ಮಗಳಿದ್ದಾಳೆ ಎಂಬ ವರದಿ ಪ್ರಕಟವಾಗಿದೆ.
ಆದರೆ ಇದು ಸತ್ಯಕ್ಕೆ ದೂರವಾದ ಸುದ್ದಿ ಎಂದು ನೇತಾಜಿಯ ಕುಟುಂಬದ ಆಪ್ತ ಸುಗತಾ ಬೋಸ್ ಹೇಳಿದ್ದಾರೆ. ಸ್ವಾರಸ್ಯಕರವಾದ ವಿಷಯವೇನೆಂದರೆ, ನೇತಾಜಿಯ ಬಗ್ಗೆ ಇರುವ ದಾಖಲೆಗಳನ್ನು ದಾಖಲಿಸಿದ ವಿಶೇಷ ತಂಡದ ಅಧಿಕಾರಿಗಳು ನೇತಾಜಿಯ ಮಗಳ ಹೆಸರಿನ ಬಗ್ಗೆ ಗೊಂದಕ್ಕೊಳಾಗಿದ್ದಾರೆ ಎಂದು ಪರಿಣಿತರೊಬ್ಬರು ವಾದಿಸುತ್ತಿದ್ದಾರೆ.
ನೇತಾಜಿಯವರು ಎಮಿಲಿ ಶೆನ್ಕಲ್ ಎಂಬಾಕೆಯನ್ನು ನೇತಾಜಿ ಮದುವೆಯಾಗಿದ್ದು ಅದರಲ್ಲಿ ಅನಿತಾ ಎಂಬ ಮಗಳಿದ್ದಾಳೆ. ಆಕೆ ಆಸ್ಟ್ರೀಯಾದಲ್ಲಿದ್ದು, ಇದು ಚೆಕೋಸ್ಲೋವಾಕಿಯಾದ ಗಡಿಪ್ರದೇಶಕ್ಕೆ ಹತ್ತಿರವಾಗಿದೆ. ಅನಿತಾ ಮತ್ತು ನಿಮಾ ಎಂಬ ಎರಡೂ ಹೆಸರಿನ ಉಚ್ಛಾರಣೆಯಲ್ಲಿ ಸಾಮ್ಯತೆ ಈ ಗೊಂದಲಕ್ಕೆ ಕಾರಣವಾಗಿರಬಹುದೆಂದು ಪರಿಣಿತರೊಬ್ಬರು ಹೇಳಿರುವುದನ್ನೂ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.