ರಾಷ್ಟ್ರೀಯ

ಏರ್ ಟೆಲ್ ನ ಎಲ್ಲಾ ಪ್ರೀಪೇಯ್ಡ್ ಗ್ರಾಹಕರಿಗೂ ಪ್ರತಿ ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಅನ್ವಯ

Pinterest LinkedIn Tumblr

airtelನವದೆಹಲಿ: ಭಾರತೀಯ ಟೆಲಿಕಾಂ ಸಂಸ್ಥೆ ಭಾರತಿ ಏರ್ ಟೆಲ್ ಸಂಸ್ಥೆ ತನ್ನ ಎಲ್ಲಾ ಪ್ರೀಪೇಯ್ಡ್ ಗ್ರಾಹಕರನ್ನು ಪ್ರತಿ ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಯೋಜನೆಯ ವ್ಯಾಪ್ತಿಗೆ ಸೇರಿಸಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾಲ್ ಡ್ರಾಪ್ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿರುವ ಟ್ರಾಯ್,  ಕಾಲ್ ಡ್ರಾಪ್ ಆಗುವುದರಿಂದ ಟೆಲಿಕಾಂ ಸಂಸ್ಥೆಗಳಿಗೆ ಲಾಭವಿರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರು ನೆಟ್ ವರ್ಕ್ ಬಳಸಿದಷ್ಟೇ ಪಾವತಿ ಮಾಡುವ ನಿಟ್ಟಿನಲ್ಲಿ ಎಲ್ಲಾ ಗ್ರಾಹಕರನ್ನು ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಯೋಜನೆ ವ್ಯಾಪ್ತಿಗೆ ಸೇರಿಸಿದೆ.

ಇವತ್ತಿನಿಂದ ಎಲ್ಲಾ ಪ್ರೀಪೇಯ್ಡ್ ಮೊಬೈಲ್ ಗ್ರಾಹಕರನ್ನು ಒಂದು ಪೈಸೆ ಕರೆ ದರ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಏರ್ ಟೆಲ್ ಹೇಳಿದೆ. ಏರ್ ಟೆಲ್ ಗ್ರಾಹಕರ ಪೈಕಿ ಶೇ.94 .4 ರಷ್ಟು ಗ್ರಾಹಕರು ಪ್ರೀಪೇಯ್ಡ್ ಸಂಪರ್ಕ ಹೊಂದಿದ್ದಾರೆ. ಸಂಸ್ಥೆಯ ಬಹುತೇಕ ಗ್ರಾಹಕರು ಪ್ರೀಪೇಯ್ಡ್ ಸಂಪರ್ಕವನ್ನೇ ಹೊಂದಿದ್ದಾರೆ.

Write A Comment