ರಾಷ್ಟ್ರೀಯ

ಹೆಚ್ಚು ಖಾದಿ ಬಳಸಿ : ‘ಮನ್‌ಕಿಬಾತ್’ ನಲ್ಲಿ ಕರೆನೀಡಿದ ಪಿಎಂ ಮೋದಿ

Pinterest LinkedIn Tumblr

moನವದೆಹಲಿ, ಸೆ.20- ಸ್ವಚ್ಛಭಾರತ ಆಂದೋಲನಕ್ಕೆ ಎಲ್ಲರ ಸಹಭಾಗಿತ್ವ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆಕಾಶವಾಣಿಯ ಮನ್‌ಕಿಬಾತ್ 12ನೇ ಸರಣಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇದೊಂದು ಉತ್ತಮ ಅಭಿಯಾನವಾಗಿದ್ದು,  ಇದಕ್ಕೆ ಎಲ್ಲರಿಂದ ಸಹಕಾರ ದೊರೆಯುತ್ತವೆ ಎಂದರು. ಮನ್‌ಕಿಬಾತ್‌ಗೆ ಇಲ್ಲಿಯವರೆಗೆ ಸುಮಾರು 55 ಸಾವಿರ ಕರೆಗಳು ಬಂದಿದ್ದು, ಎಲ್ಲರ ಸಲಹೆ ಸೂಚನೆಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದ ಅವರು, 9 ವರ್ಷದ ಬಾಲಕನಿಂದ ಹಿಡಿದು ಹಿರಿಯರವರೆಗೆ ಸಲಹೆ, ಸೂಚನೆ ನೀಡುತ್ತಿದ್ದಾರೆ ಎಲ್ಲವನ್ನೂ ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮನ್‌ಕಿಬಾತ್‌ಗೆ ಸಕಾರಾತ್ಮಕ ಬೆಂಬಲ ದೊರೆಯುತ್ತಿದೆ ಎಂದ ಅವರು, ಗಿವ್ ಇಟ್ ಅಪ್ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. ಸಾರ್ವಜನಿಕರ ಪ್ರಚಾರ ಆಂದೋಲನಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ ಎಂದರು. ಎಲ್ಲರೂ ಖಾದಿ ವಸ್ತುಗಳನ್ನು ಬಳಸಬೇಕು ಎಂದು ಸಲಹೆ ನೀಡಿದ ಪ್ರಧಾನಿ ಮೋದಿ ಅವರು ಕನಿಷ್ಠ ಒಂದು ತಿಂಗಳಾದರೂ ಖಾದಿ ಬಟ್ಟೆ ತೊಡಬೇಕೆಂದರು. ಕೆಲವರು ತನ್ನ ಮನೆಗೆ ಬಂದು ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಪ್ರಧಾನಿ, ಅವುಗಳು ಸದಾ ತಮ್ಮ ಮನಸ್ಸಿನಲ್ಲಿ ಉಳಿದಿದೆ ಎಂದರು.

ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಹಲವರು ಬಿಟ್ಟುಕೊಟ್ಟಿದ್ದಾರೆ. ಇದು ಹೆಮ್ಮೆಯ ವಿಷಯ ಎಂದ ಅವರು, ಸ್ವಚ್ಛ ಭಾರತ ಆಂದೋಲನಕ್ಕೆ ಸಹ ನಾಗರಿಕರು ಕೈ ಜೊಡಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸದ ಡಬ್ಬಿಗಳನ್ನು ಇಟ್ಟು ಸ್ವಚ್ಛತೆಗೆ ಗಮನ ಹರಿಸಬೇಕು ಎಂದರು. ನೇತಾಜಿ ಸುಭಾಷ್ ಚಂದ್ರಬೋಸ್ ಕುಟುಂಬದ ಸದಸ್ಯರು ಪ್ರಧಾನಿ ಕಾರ್ಯಾಲಯಕ್ಕೆ ಬಂದು ತಮ್ಮನ್ನು ಭೇಟಿಯಾಗಿರುವುದು ಸ್ವಾಗತಾರ್ಹ ವಿಷಯ ಎಂದರು.

Write A Comment