ರಾಷ್ಟ್ರೀಯ

ಪಾಕ್‌ನಲ್ಲಿ ‘ನಕಲಿ’ ಟೈಗರ್ ಮೆಮನ್ ಬಂಧನ

Pinterest LinkedIn Tumblr

tiger_memon1ನವದೆಹಲಿ: ಮುಂಬೈ ಸರಣಿ ಬಾಂಬ್ ಸ್ಫೋಟದ ಮಾಸ್ಟರ್‌ಮೈಂಡ್ ಟೈಗರ್ ಮೆಮನ್‌ನ್ನು ಬುಧವಾರ ಪಾಕಿಸ್ತಾನದ ಕರಾಚಿಯಲ್ಲಿ ಬಂಧಿಸಲಾಗಿದೆ ಎಂಬ ಸುದ್ದಿ ಕೇಳಿದೊಡನೆ ಎಲ್ಲರೂ ಒಂದು ಕ್ಷಣ ಹೌದಾ? ಎಂದು ಉದ್ಗರಿಸಿದ್ದು ನಿಜ.

ಆದರೆ ಬಂಧಿತನಾದದ್ದು ಉಗ್ರ ಟೈಗರ್ ಮೆಮನ್ ಅಲ್ಲ, ನಕಲಿ ಟೈಗರ್ ಮೆಮನ್. ಪಾಕಿಸ್ತಾನದಲ್ಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಂಧಿತನಾದ ಆ ವ್ಯಕ್ತಿಯ ಹೆಸರು ಫರ್ಕಾನ್.

ಭೂಗತ ದೊರೆ ಟೈಗರ್ ಮೆಮನ್ ಹೆಸರಿನಲ್ಲಿ ಈತ ಹೆಣ್ಮಕ್ಕಳನ್ನು ಚುಡಾಯಿಸುತ್ತಿದ್ದ, ಜನರನ್ನು ಬೆದರಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಇದೀಗ ಪೊಲೀಸರ ಅತಿಥಿಯಾಗಿರುವ ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

1993ರ ಮುಂಬೈ ಸರಣಿ  ಸ್ಫೋಟದಲ್ಲಿ ಪ್ರಧಾನ ಪಾತ್ರ ವಹಿಸಿದ್ದ  ಟೈಗರ್ ಮೆಮನ್ ದುಬೈನಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಆತನಿಗಾಗಿ ಇಂಟರ್‌ಪೋಲ್ ಮತ್ತು ಸಿಬಿಐ ಹಲವಾರು ವರ್ಷಗಳಿಂದ ಹುಡುಕಾಟ ನಡೆಸುತ್ತಿದೆ.

Write A Comment