ರಾಷ್ಟ್ರೀಯ

ಮೋದಿ ಪ್ರಭಾವ: ‘ನಮ್ಮನ್ನು ಭಾರತಕ್ಕೆ ಸೇರಿಸಿ’ ಎಂದ ಪಾಕ್ ಆಕ್ರಮಿತ ಕಾಶ್ಮೀರದ ಜನತೆ

Pinterest LinkedIn Tumblr

modi_narendra_1ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಪ್ರಭಾವವೀಗ ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆಯಾಗಿ ಮೊಳಗಿದೆ. ಅದೇನೆಂದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುತ್ತಿರುವ ಜನರೀಗ ತಮ್ಮನ್ನು ಭಾರತಕ್ಕೆ ಸೇರಿಸಿ ಎಂದು ಮೊರೆಯಿಟ್ಟಿದ್ದಾರೆ.

2015ರ ಭೂಕಂಪ ಮತ್ತು 2014ರಲ್ಲಿ ಸಂಭವಿಸಿದ ಪ್ರವಾಹದ ವೇಳೆ ಭಾರತ ಸರ್ಕಾರ ನೀಡಿದ ನೆರವಿಗೆ ಪಾಕ್ ಆಕ್ರಮಿತ ಕಾಶ್ಮೀರದ ಜನತೆ ಅಭಾರಿಯಾಗಿದೆ.  ಭಾರತ ಸರ್ಕಾರದ ಈ ಕಾರ್ಯಗಳು ಅಲ್ಲಿನ ಜನತೆಯಲ್ಲಿ ಹೊಸ ಆಶಾಕಿರಣಗಳನ್ನೂ ಹುಟ್ಟು ಹಾಕಿವೆ.

ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದ ಅಂಜುಮಾನ್ ಮಿನ್‌ಹಾಜ್ ಇ ರಸೂಲ್  ಚೇರ್‌ಮೆನ್ ಮೌಲಾನಾ ಸಯ್ಯದ್ ಅಥರ್ ಹುಸೈನ್ ದೆಹ್ಲವಿ ಅಲ್ಲಿನ ಜನರಿಗೆ ಭಾರತಕ್ಕೆ ಸೇರುವ ಇಚ್ಛೆಯಿದೆ ಎಂದು ಹೇಳಿರುವುದಾಗಿ ಉಲ್ಲೇಖಿಸಿದ್ದಾರೆ.

ಪಾಕಿಸ್ತಾನದಲ್ಲಿ ಉಲ್ಬಣಗೊಳ್ಳುತ್ತಿರುವ ಭಯೋತ್ಪಾದನೆಯಿಂದ ಅಲ್ಲಿನ ಜನರು ರೋಸಿ ಹೋಗಿದ್ದಾರೆ. ಅವರೀಗ ಶಾಂತಿಯುತವಾಗಿ ಬದಕಲು ಹಂಬಲಿಸುತ್ತಿದ್ದು, ಭಾರತಕ್ಕೆ ಸೇರಲು ಇಚ್ಛೆ ವ್ಯಕ್ತ ಪಡಿಸುತ್ತಿದ್ದಾರೆ ಎಂದು ದೆಹ್ಲವಿ ಹೇಳಿದ್ದಾರೆ.

ಅಲ್ಲಿನ ಜನರಿಗೆ ಭಾರತದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಅವಕಾಶ ನೀಡಿದರೆ ಅವರು ಭಾರತ ಪೌರತ್ವ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಅದೇ ವೇಳೆ ಬಲೂಚಿಸ್ತಾನ ಮತ್ತು ಕರಾಚಿಯಲ್ಲಿರುವ ಜನರಿಗೂ ಭಾರತದೊಂದಿಗೆ ಸಂಬಂಧ ಬೆಸೆಯುವ ಕಾತರವಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜನರು ಮೋದಿ ಸರ್ಕಾರದ ಆಡಳಿತ ವೈಖರಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ದೆಹ್ಲವಿ ಹೇಳಿದ್ದಾರೆ.

Write A Comment