ರಾಷ್ಟ್ರೀಯ

ಲಾಸಲ್‌ಗಾಂವ್: ಈರುಳ್ಳಿ ಸಗಟು ಬೆಲೆಯಲ್ಲಿ ಇಳಿಕೆ

Pinterest LinkedIn Tumblr

onion-price-riseಹೊಸದಿಲ್ಲಿ, ಆ.31: ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿರುವ ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ಸೋಮವಾರ ಈರುಳ್ಳಿ ಬೆಲೆ ಮೂರು ರೂಪಾಯಿಯಷ್ಟು ಇಳಿಕೆಯಾಗಿದ್ದು, ಕೆಜಿಗೆ 45 ರೂಪಾಯಿಯಂತೆ ವಹಿವಾಟು ನಡೆದಿದೆ.

ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಂಕಿಅಂಶಗಳ ಪ್ರಕಾರ, ಈರುಳ್ಳಿ ಸಗಟು ಬೆಲೆ 45 ರೂಪಾಯಿಗೆ ಇಳಿದಿದೆ. ಕಳೆದ ವಾರ ಲಾಸಲ್‌ಗಾಂವ್‌ನ ಈರುಳ್ಳಿ ಮಂಡಿಗಳಲ್ಲಿ ಈರುಳ್ಳಿಯ ಸಗಟು ಬೆಲೆ 48 ರೂಪಾಯಿಯಿತ್ತು.

ಆದರೆ, ದೇಶದ ಉಳಿದ ಭಾಗಗಳಲ್ಲಿ ಈರುಳ್ಳಿ ಕೆಜಿಗೆ ಈಗಲೂ 80 ರೂಪಾಯಿ ಬೆಲೆ ಇದೆ. ಗ್ರಾಹಕರ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದಿಲ್ಲಿಯಲ್ಲಿ ಕೆಜಿಗೆ 67 ರೂಪಾಯಿ, ಮುಂಬೈನಲ್ಲಿ 61 ರೂಪಾಯಿ, ಕೋಲ್ಕತಾದಲ್ಲಿ 50 ರೂಪಾಯಿ ಹಾಗೂ ಚೆನ್ನೈನಲ್ಲಿ ಕೆಜಿಗೆ 47 ರೂಪಾಯಿಯಂತೆ ಈರುಳ್ಳಿ ಮಾರಾಟವಾಗುತ್ತಿದೆ.

Write A Comment