ರಾಷ್ಟ್ರೀಯ

ಸೈನಿಕರ ‘‘ಸಮಾನ ಶ್ರೇಣಿ ಸಮಾನ ಪಿಂಚಣಿ’’; ವಾರ್ಷಿಕ ಪರಿಷ್ಕರಣೆ ಸಾಧ್ಯವಿಲ್ಲ: ಅರುಣ್ ಜೇಟ್ಲಿ

Pinterest LinkedIn Tumblr

arun jetlyಹೊಸದಿಲ್ಲಿ, ಆ.31: ‘‘ಸಮಾನ ಶ್ರೇಣಿ ಸಮಾನ ಪಿಂಚಣಿ’’ಗಾಗಿ ಚಳವಳಿ ನಡೆಸುತ್ತಿರುವ ಮಾಜಿ ಸೈನಿಕರ ಬೇಡಿಕೆಯಂತೆ ಪಿಂಚಣಿಯನ್ನು ವಾರ್ಷಿಕವಾಗಿ ಪರಿಷ್ಕರಿಸುವ ಸಾಧ್ಯತೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ತಳ್ಳಿಹಾಕಿದ್ದಾರೆ. ಆದರೆ, ಚಿಕ್ಕ ಪ್ರಾಯದಲ್ಲೇ ನಿವೃತ್ತರಾಗುವ ಯೋಧರ ಹಿತವನ್ನು ಹೆಚ್ಚಿನ ಪಿಂಚಣಿ ನೀಡುವ ಮೂಲಕ ಕಾಯ್ದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ವಾರ್ಷಿಕ ಪಿಂಚಣಿ ಪರಿಷ್ಕರಣೆ ಪ್ರಪಂಚದಲ್ಲಿ ಎಲ್ಲಿಯೂ ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ಸಮಾನ ಶ್ರೇಣಿಗೆ ಸಮಾನ ಪಿಂಚಣಿ (ಒಆರ್‌ಒಪಿ)ಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದ ಅವರು, ಆದರೆ, ಒಂದೇ ಒಂದು ಸಮಸ್ಯೆಯೆಂದರೆ ‘‘ಅಂಕಗಣಿತದ ಲೆಕ್ಕಾಚಾರ’’ ಎಂದರು.
ಸರಕಾರಿ ಉದ್ಯೋಗಿಗಳ ಏಳನೆ ವೇತನ ಆಯೋಗದ ಶಿಫಾರಸುಗಳು ಶೀಘ್ರದಲ್ಲೇ ಜಾರಿಯಾಗಲಿವೆ ಎಂದು ಅವರು ತಿಳಿಸಿದರು.

Write A Comment