ರಾಷ್ಟ್ರೀಯ

ಪರಿಸರ ಕುರಿತು ಜಾಗೃತಿ ಮೂಡಿಸಲು ನಿತೀಶ್‌ರಿಂದ ವೃಕ್ಷಕ್ಕೆ ರಕ್ಷಾಬಂಧನ

Pinterest LinkedIn Tumblr

nitishಪಾಟ್ನಾ,ಆ.29: ಶನಿವಾರ ರಕ್ಷಾ ಬಂಧನದ ಸಂದರ್ಭ ಇಲ್ಲಿಯ ರಾಜಧಾನಿ ವಾಟಿಕಾದಲ್ಲಿ ವೃಕ್ಷವೊಂದಕ್ಕೆ ರಕ್ಷೆಯನ್ನು ಕಟ್ಟುವ ಮೂಲಕ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಉದಾತ್ತ ಪರಿಪಾಠವೊಂದಕ್ಕೆ ನಾಂದಿ ಹಾಡಿದರು. ಬಿಹಾರದಲ್ಲಿ ಹಸಿರನ್ನು ರಕ್ಷಿಸುವಂತೆ ಅವರು ಈ ಸಂದರ್ಭದಲ್ಲಿ ಜನರನ್ನು ಆಗ್ರಹಿಸಿದರು.

ಆರೋಗ್ಯಕರ ಪರಿಸರ ನಿರ್ಮಾಣಕ್ಕಾಗಿ ಜನರು ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸಬೇಕು ಎಂದು ಅವರು ಹೇಳಿದರು. ಪರಿಸರ ರಕ್ಷಣೆಗಾಗಿ ಮರಗಳಿಗೆ ‘ರಾಖಿಗಳನ್ನು’ ಕಟ್ಟುವಂತೆ ನಾನು ಜನತೆಯನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಪೃಥ್ವಿ ಮತ್ತು ಮಾನವಜೀವಿಗಳ ರಕ್ಷಣೆಯ ನಿಟ್ಟಿನಲ್ಲಿ ಇದೊಂದು ಹೊಸ ಹೆಜ್ಜೆಯಾಗುತ್ತದೆ ಎಂದ ಅವರು,ಗಿಡಗಳನ್ನು ನೆಡಲು ಮತ್ತು ರಾಜ್ಯದ ಹಸಿರು ಹೊದಿಕೆಯನ್ನು ರಕ್ಷಿಸಲು ರಾಜ್ಯ ಸರಕಾರವು ಜನರನ್ನು ಉತ್ತೇಜಿಸುತ್ತಲೇ ಬಂದಿದೆ ಎಂದರು.

ಭಾಗಲ್ಪುರ ಜಿಲ್ಲೆಯ ಧರ್ಹಾರಾ ಗ್ರಾಮದಿಂದ ಪ್ರಭಾವಿತರಾದ ನಿತೀಶ್ ರಾಜ್ಯದಲ್ಲಿಯ ಅರಣ್ಯ ಪ್ರಮಾಣವನ್ನು ಹೆಚ್ಚಿಸಲು ಕೆಲವು ವರ್ಷಗಳ ಹಿಂದೆಯೇ ಹಸಿರು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಗ್ರಾಮದಲ್ಲಿ ಪ್ರತಿ ಮಗು ಜನಿಸಿದಾಗಲೂ ಗ್ರಾಮಸ್ಥರು ಹಣ್ಣಿನ ಗಿಡಗಳನ್ನು ನೆಡುತ್ತಿದ್ದಾರೆ. ಅವರ ಈ ಪ್ರಯತ್ನ ಗ್ರಾಮವನ್ನು ಹಸಿರು ಸ್ವರ್ಗವನ್ನಾಗಿಸಿದೆ.

Write A Comment