ನವದೆಹಲಿ: ಶೀನಾ ಬೋರಾ ಕೊಲೆ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ಸಾವಿಗೂ ಮುನ್ನ ಶೀನಾ ಗರ್ಭಿಣಿಯಾಗಿದ್ದಳು ಎಂಬ ಆಘಾತಕಾರಿ ವಿಷಯವೊಂದು ವರದಿಯಾಗಿದೆ.
ವರದಿ ಪ್ರಕಾರ, ಶೀರಾ ಬೋರಾ ತಾನು ಗರ್ಭಿಣಿಯಾಗಿರುವ ವಿಚಾರವನ್ನು ತಾಯಿ ಇಂದ್ರಾಣಿ ಮುಖರ್ಜಿ ಬಳಿ ಹೇಳಿಕೊಂಡಿದ್ದು, ಮಗುವಿಗೆ ಜನ್ಮ ಕೊಡಬೇಕೆಂದು ಬಯಸಿದ್ದಳು ಎನ್ನಲಾಗಿದೆ.
ಇಂದ್ರಾಣಿ ಮುಖರ್ಜಿಗೆ ತೀರಾ ಆತ್ಮೀಯರಾಗಿದ್ದವರೊಂದಿಗೆ ಶೀನಾ ಬೋರಾ ಸಂಬಂಧ ಹೊಂದಿದ್ದು, ಇಬ್ಬರು ಜತೆಗೂಡಿ ಥಾಲ್ಯಾಂಡ್ ಗೂ ಹೋಗಿದ್ದರು ಎಂಬ ಮತ್ತಷ್ಟು ಮಾಹಿತಿಗಳು ವರದಿಯಾಗಿವೆ.
ಪೊಲೀಸರ ಪ್ರಕಾರ, ಸ್ಟಾರ್ ಟಿವಿ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರಿಗೆ ಇಂದ್ರಾಣಿ ಎರಡನೇ ಹೆಂಡತಿಯಾಗಿದ್ದು, ಪೀಟರ್ ಮುಖರ್ಜಿ ಮೊದಲ ಪತ್ನಿಗೆ ರಾಹುಲ್ ಎಂಬ ಮಗನಿದ್ದನು. ಇಂದ್ರಾಣಿ ಪುತ್ರಿ ಶೀನಾ ಹಾಗೂ ಪೀಟರ್ ಪುತ್ರ ರಾಹುಲ್ ನಡುವೆ ಸಂಬಂಧವೇರ್ಪಟ್ಟಿತ್ತು. ಇದು ಇಂದ್ರಾಣಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ.