ರಾಷ್ಟ್ರೀಯ

ಆನ್‌ಲೆನ್‌ನಲ್ಲಿ ಅಗ್ಗದ ಈರುಳ್ಳಿ!?

Pinterest LinkedIn Tumblr

Onionಕೆಲವು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯ ಬಳಿಕ ಹಾಗೂ ಬಳಿಕ ಮಳೆಯ ಕೊರತೆಯಿಂದಗಿ, ಈರುಳ್ಳಿಯ ಬೆಲೆ ಸಗಟು ಮಾರುಕಟ್ಟೆ ಯಲ್ಲಿ ಕಿ.ಗ್ರಾಂ.ಗೆ ರೂ. 30-50 ಇದ್ದುದು ರೂ. 60-65ಕ್ಕೇರಿದೆ. ಬಟಾಟೆ, ಬದನೆ, ಮೂಲಂಗಿ, ಕ್ಯಾರೆಟ್‌ಗಳಂತಹ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ಆನ್‌ಲೈನ್ ಬೆಲೆಗಳು ಕನಿಷ್ಠ ಶೇ.10ರಷ್ಟು ಕಡಿಮೆ ಎನ್ನಲಾಗುತ್ತಿದೆ.

ರಿಲಯನ್ಸ್ ರಿಟೇಲ್ ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆಯಲ್ಲಿ ಮಾರತೊಡಗಿದಾಗ ಹಾಗೂ ಮಧ್ಯವರ್ತಿಗಳನ್ನು ನಿವಾರಿಸುವ ಮಾತನ್ನಾಡಿದಾಗ, ಉತ್ತರಪ್ರದೇಶದ ಆಗಿನ ಮಾಯಾವತಿ ಸರಕಾ ರವು, ಅದನ್ನು ಕಾನೂನು-ಸುವ್ಯವಸ್ಥೆ ಸಮಸ್ಯೆಯೆಂದು ಕರೆದು ಅಂಗಡಿಗಳನ್ನು ಮುಚ್ಚಿಸಿತ್ತು.

ಎಂಟು ವರ್ಷಗಳ ಬಳಿಕ, ಆನ್‌ಲೈನ್ ದಿನಸಿ ಅಂಗಡಿಗಳು, ಹತ್ತಿರದ ಅಂಗಡಿಗಳು ಮಾರುವ ಬೆಲೆಯ ಅರ್ಧದಷ್ಟಕ್ಕೆ ಈರುಳ್ಳಿಯ ಕೊಡುಗೆ ನೀಡುವುದರೊಂದಿಗೆ ಗ್ರಾಹಕರ ಒಲವು ಗಳಿಸುವ ಬಗ್ಗೆ ಯೋಚಿಸುತ್ತಿವೆ. ಲೋಕಲ್‌ಬನ್ಯಾ, ಮೆರಾ ಗ್ರೋಸರ್, ಫ್ರೆಶ್‌ಫಲ್ ಸಬ್ಜಿ ಡಾಟ್ ಕಾಂ ಹಾಗೂ ಗ್ರೋಸರ್ ಮ್ಯಾಕ್ಸ್‌ಗಳಂತಹ ಕಂಪೆನಿಗಳು, ಅಂಗಡಿಗಳಲ್ಲಿರುವ ಕಿ.ಗ್ರಾಂ.ಗೆ 80 ರೂ. ಬದಲು 40ರಿಂದ 69 ರೂ.ವರೆಗಿನ ಬೆಲೆಗೆ ಈರುಳ್ಳಿಯನ್ನು ಪೂರೈಸುತ್ತವೆ. ಉತ್ತಮ ಸಾಗಾಟ ವ್ಯವಸ್ಥೆ ಹಾಗೂ ಮಧ್ಯವರ್ತಿಗಳ ನಿವಾರಣೆಯಿಂದ ಅವುಗಳಿಗೆ ಇದು ಸಾಧ್ಯವಾಗುತ್ತದೆ.

ಈರುಳ್ಳಿಯ ಅಗ್ಗದ ಬೆಲೆಯು ಮಾರಾಟ ತಂತ್ರ ಹಾಗೂ ಖರೀದಿಗಳ ಮಿಶ್ರ ಫಲವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಕೆಲವೊಮ್ಮೆ ಕಡಿಮೆ ಲಾಭಾಂಶ ಇರಿಸುತ್ತೇವೆ. ಆನ್‌ಲೈನ್ ಸ್ಟೋರ್‌ನ ಮಾದರಿಯು ಭಾಗಶಃ ಸಂಶೋಧನಾ- ಪ್ರೇರಿತ. ಅದು ಸೂಕ್ತ ಸಮಯದಲ್ಲಿ ಖರೀದಿ ಮಾಡುತ್ತದೆ. ಈ ಮೂಲಕ, ಕೆಲವೊಮ್ಮೆ ಅತ್ಯುತ್ತಮ ವ್ಯಾಪಾರ ನಡೆಸುತ್ತದೆ. ತಾವದರ ಲಾಭವನ್ನು ಗ್ರಾಹಕರಿಗೆ ನೀಡಬಯಸುತ್ತೇವೆಂದು ಲೋಕಲ್‌ಬನ್ಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರಣ್ ಮೆಹ್ರೋತ್ರಾ ವಿವರಿಸಿದ್ದಾರೆ.
ದಿಲ್ಲಿಯ ಇನ್ನೊಂದು ತಾಜಾ ಹಣ್ಣು ಹಾಗೂ ತರಕಾರಿಗಳ ಸ್ಟಾರ್ಟಪ್ ರಿಟೇಲರ್ ಫ್ರೆಶ್‌ಫಲ್ ಸಬ್ಜಿ, ಈರುಳ್ಳಿಯನ್ನು ಕಿ.ಗ್ರಾಂ.ಗೆ ರೂ. 40ರಂತೆ ಮಾರುತ್ತಿದೆ. ನಾವು ಈರುಳ್ಳಿಯನ್ನು ನಷ್ಟದಲ್ಲಿ ಮಾರುತ್ತಿದ್ದೇವೆ. ಆದರೆ, ಸ್ಥಳೀಯ ಜಾಹೀರಾತು ಹಾಗೂ ಪ್ರಾಯೋಜಕತ್ವಗಳಂತಹ ಮಾರುಕಟ್ಟೆ ಖರ್ಚುಗಳನ್ನು ಕಡಿಮೆಗೊಳಿಸಿದ್ದೇವೆಂದು ಆರ್‌ಎಸ್‌ಎನ್‌ಡಿ ಪ್ರಾಯೋಜಿತ ಫ್ರೆಶ್‌ಫಟ್‌ಸಬ್ಜಿಯ ಅಧ್ಯಕ್ಷ ರಾಜೇಶ್ ಗುಪ್ತಾ ಹೇಳಿದ್ದಾರೆ. ಸಂಸ್ಥೆಯು ತನ್ನ ಜಾಲತಾಣವನ್ನು ಉತ್ತೇಜಿಸಲು ಟಿವಿ ನಟಿ ಸಾಕ್ಷಿ ತನ್ವರ್‌ರನ್ನು ಬಳಸಿಕೊಂಡಿದೆ. ಅದು ತರಕಾರಿಯನ್ನು ರೈತರಿಂದಲೇ ನೇರವಾಗಿ ಖರೀದಿಸುತ್ತದೆ ಹಾಗೂ ಕನಿಷ್ಠ ಸದ್ಯದ ಮಟ್ಟಿಗೆ ಲಾಭ-ನಷ್ಟ ರಹಿತವಾಗಿ ಮಾರುತ್ತಿದೆಯೆಂದು ಅವರು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯ ಬಳಿಕ ಹಾಗೂ ಮಳೆಯ ಕೊರತೆ ಯಿಂದಾಗಿ, ಈರುಳ್ಳಿಯ ಬೆಲೆ ಸಗಟು ಮಾರುಕಟ್ಟೆ ಯಲ್ಲಿ ಕಿ.ಗ್ರಾಂ.ಗೆ ರೂ. 30-50 ಇದ್ದುದು ರೂ. 60-65ಕ್ಕೇರಿದೆ. ಬಟಾಟೆ, ಬದನೆ, ಮೂಲಂಗಿ, ಕ್ಯಾರೆಟ್‌ಗಳಂತಹ ತರಕಾರಿಗಳ ಬೆಲೆಯೂ ಹೆಚ್ಚಾಗಿವೆ. ಆನ್‌ಲೈನ್ ಬೆಲೆಗಳು ಕನಿಷ್ಠ ಶೇ.10ರಷ್ಟು ಕಡಿಮೆ ಇರುತ್ತದೆ ಎನ್ನಲಾಗುತ್ತಿದೆ.

ಗುರ್ಗಾಂವ್ ಮೂಲದ ಆನ್‌ಲೈನ್ ದಿನಸಿ ಅಂಗಡಿ ವೆುೀರಾಗ್ರೋಸರ್. ಬುಧವಾರದಿಂದ ರವಿವಾರದ ವರೆಗೆ ಶೇ.30 ಕಡಿತದ ಮಾರಾಟ ವನ್ನು ನಡೆಸುತ್ತದೆ. ಕೆಲವು ವಸ್ತುಗಳು ಸಗಟು ಬೆಲೆಗಿಂತಲೂ ಕಡಿಮೆಗೆ ದೊರೆಯುತ್ತವೆ. ಈರುಳ್ಳಿ ಕಿ.ಗ್ರಾಂ.ಗೆ ರೂ. 42ರಂತೆ ಲಭಿಸು ತ್ತದೆ. ಈ ಅಭಿಯಾನವನ್ನು ಈ ವಾರ ತರಕಾರಿಗೆ ವಿಸ್ತರಿಸಲಾಗಿದೆ. ಇಡೀ ಅಭಿಯಾನವು ಸಗಟು ಬೆಲೆಗಿಂತ ಅಗ್ಗ- ಆಝಾದ್‌ಪುರ್ ಮಂಡಿ ಸೇ ಭೀ ಸಸ್ತಾ (ಆಝಾದ್‌ಪುರ ಮಂಡಿಗಿಂತಲೂ ಅಗ್ಗ) ಸಿದ್ಧಾಂತವನ್ನವಲಂಬಿಸಿದೆ. ಕಂಪೆನಿಯು ದಿನವಹಿ ದರಕಡಿತದ ಮಾರಾಟ ಆರಂಭಿಸಲು ನಿರ್ಧರಿಸಿದೆಯೆಂದು ಮೇರಾ ಗ್ರೋಸರ್‌ನ ಸಹ-ಸ್ಥಾಪಕ ಸೌರಭ್‌ಚಂದ್ರ ಹೇಳಿದ್ದಾರೆ.
ಆನ್‌ಲೈನ್ ದಿನಸಿ ಅಂಗಡಿಗಳು ಹಣ ಮಾಡದಿದ್ದರೂ, ಹೆಚ್ಚಿನವು ಭಾರೀ ನಿಧಿ ಯನ್ನು ಹೊಂದಿವೆ ಹಾಗೂ ಮಾರಾಟ ಹಾಗೂ ಉತ್ತೇಜನಕ್ಕಾಗಿ ಭಾರೀ ಖರ್ಚು ಮಾಡುತ್ತವೆ. ದೇಶದ ಒಟ್ಟಾರೆ ಚಿಲ್ಲರೆ ಖರ್ಚಿನಲ್ಲಿ ಆಹಾರ ಮತ್ತು ದಿನಸಿ ವಸ್ತುಗಳ ಪ್ರಮಾಣ ಮುಕ್ಕಾಲಂಶಕ್ಕೆ ಸಮೀಪವಿದೆಯೆಂದು ಉದ್ಯಮದ ಅಂದಾಜುಗಳು ತಿಳಿಸುತ್ತವೆ. ಹೆಚ್ಚು ಮಾರಾಟವಾಗುವ ಸಾಮಗ್ರಿಗಳ ಇ-ವಾಣಿಜ್ಯವು 2014ರಲ್ಲಿ 36 ಶತಕೋಟಿ ಡಾಲರ್‌ಗಳಿಗೆ ಏರಲಿದೆಯೆಂದು ಕಂಟಾರ್ ವರ್ಲ್ಡ್ ಪ್ಯಾನೆಲ್ ಸಂಶೋಧನಾ ಸಂಸ್ಥೆಯ ವರದಿ ಹೇಳಿದೆ.
ಗುರ್ಗಾಂವ್‌ನಲ್ಲಿ ಸೇವೆ ಸಲ್ಲಿಸುವ ಆನ್‌ಲೈನ್ ದಿನಸಿ ಸ್ಟೋರ್ ಗ್ರೋಸರ್ ಮ್ಯಾಕ್ಸ್ ಡಾಟ್ ಕಾಂ, ಸದ್ಯವೇ ತನ್ನ ವ್ಯವಹಾರವನ್ನು ರಾಷ್ಟ್ರ ರಾಜಧಾನಿ ವಲಯಕ್ಕೆ (ಎನ್‌ಸಿಆರ್) ವಿಸ್ತರಿಸಲಿದೆ ಹಾಗೂ ಬೆಲೆಯನ್ನು ನಿಯಂತ್ರಿಸಲು ಪ್ರಯತ್ನಿಸಲಿದೆ.
ತಾವು ಈರುಳ್ಳಿಯನ್ನು ನೇರವಾಗಿ ಮಹಾರಾಷ್ಟ್ರದ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಹರಾಜಿನಲ್ಲಿ ಬಿಡ್ ಮಾಡುವ ಏಜೆಂಟರಿಂದ ಖರೀದಿಸುತ್ತೇವೆ. ತಾವು ಬೆಲೆ ಹೆಚ್ಚಳವನ್ನು ನಿರೀಕ್ಷಿಸುವುದಿಲ್ಲ. ಮಧ್ಯವರ್ತಿಗಳನ್ನು ದೂರವಿರಿಸಿ, ಲಾಭವನ್ನು ಒಂದಂಕಿಯಲ್ಲಿರಿಸುತ್ತೇವೆಂದು ಗ್ರೋಸೆರ್ ಮ್ಯಾಕ್ಸ್‌ಡಾಟ್ ಕಾಮ್‌ನ ಸಹ-ಸ್ಥಾಪಕ ಕೆ.ರಾಧಾಕೃಷ್ಣನ್ ತಿಳಿಸಿದ್ದಾರೆ.
ಹಾಳಾಗುವಿಕೆಯನ್ನು ಕನಿಷ್ಠಗೊಳಿಸುತ್ತೇವೆ. ತಾವು, 45-55 ಮಿ.ಮಿ. ವ್ಯಾಸದ ಈರುಳ್ಳಿಯ ಬೆಲೆಯನ್ನು ಕಿ.ಗ್ರಾಂ.ಗೆ ರೂ. 69.50ಕ್ಕೆ ತಂದಿದ್ದೇವೆ. ಮುಕ್ತ ಮಾರುಕಟ್ಟೆಯಲ್ಲಿ ಅದೇ ಗುಣಮಟ್ಟದ ಈರುಳ್ಳಿ ಕಿ.ಗ್ರಾಂ.ಗೆ ರೂ. 80-85ರಲ್ಲಿ ಮಾರಲ್ಪಡುತ್ತಿದೆ. ಕೆಲವೊಮ್ಮೆ ವ್ಯಾಪಾರಿಗಳು ಸಣ್ಣ ಗಾತ್ರದ ಈರುಳ್ಳಿಯನ್ನು ಮಿಶ್ರ ಮಾಡುತ್ತಾರೆಂಬುದು ಗ್ರಾಹಕರಿಗೆ ಗಮನಕ್ಕೆ ಬರುವುದಿಲ್ಲವೆಂದು ಅವರು ಹೇಳಿದ್ದಾರೆ.
ಕೆಲವು ಆನ್‌ಲೈನ್ ಸ್ಟೋರ್‌ಗಳು ಆಮದಿತ ಈರುಳ್ಳಿ ಮಾರಾಟದ ಯೋಜನೆಯನ್ನು ಹರಿಯಬಿಟ್ಟಿದೆ. ಆದರೆ, ಅದು ಮಹಾರಾಷ್ಟ್ರದ ರೈತರು ಪರಿಣತಿಯಿಂದ ಬೆಳೆಸುತ್ತಿರುವ ಭಾರತೀ ಯ ನಾಸಿಕ್ ರೆಡ್ ಮಾದರಿಯ ಈರುಳ್ಳಿಯನ್ನು ರುಚಿ ಹಾಗೂ ಬಣ್ಣದಲ್ಲಿ ಹೋಲುತ್ತದೆಯೇ ಎಂಬುದನ್ನು ತಾವು ನೋಡಬೇಕಾಗಿದೆಯೆಂದು ರಾಧಾಕೃಷ್ಣನ್ ತಿಳಿಸಿದ್ದಾರೆ.

ಬಿಗ್‌ಬಾಸ್ಕೆಟ್, ಬೆಲೆಯನ್ನು ಕೆಳಗಿರಿಸುವುದಕ್ಕಾಗಿ ಮಧ್ಯವರ್ತಿಗಳ ನಿವಾರಣೆಯನ್ನು ಬಯಸುತ್ತಿದೆ. ಆಫ್‌ಲೈನ್ ಮಾರುಕಟ್ಟೆಗೆ ಹೋಲಿಸಿದರೆ ತಮ್ಮ ಬೆಲೆ ಯು ಯಾವಾಗಲೂ ಸ್ಪರ್ಧಾತ್ಮಕವಾಗಿರುತ್ತವೆ. ಏಕೆಂ ದರೆ, ತಾವು ಮಧ್ಯವರ್ತಿಗಳನ್ನು ಬಿಟ್ಟು, ನೇರವಾಗಿ ರೈತರಿಂದಲೇ ಖರೀದಿಸುತ್ತೇವೆಂದು ಬಿಗ್ ಬಾಸ್ಕೆಟ್‌ನ ಸಹ-ಸ್ಥಾಪಕ ವಿಫುಲ್ ಪಾರೇಖ್ ಹೇಳಿದ್ದಾರೆ.
ಕನಿಷ್ಠ ಆರ್ಡರ್‌ನ ವೌಲ್ಯ ರೂ. 249. ದಾಸ್ತಾನು ತಡೆಯುವುದಕ್ಕಾಗಿ ಅದು ನಿಗದಿತ ದಿನದಂದು ಒಬ್ಬ ಗ್ರಾಹಕನಿಗೆ 2 ಕಿ.ಗ್ರಾಂ.ಗಿಂತ ಹೆಚ್ಚು ಈರುಳ್ಳಿಯನ್ನು ಮಾರುವುದಿಲ್ಲ. ಇತರ ತರಕಾರಿಗಳಿಗೆ ಬೇರೆ ಕಡೆಗಳಿಗಿಂತ ಶೇ.10ರಷ್ಟು ಕಡಿಮೆ ಬೆಲೆಯನ್ನು ತಾವು ಖಚಿತಪಡಿಸುತ್ತೇವೆ. ಕೆಲವು ಸೈಟ್‌ಗಳು ಅಡ್ಡ ಸಬ್ಸಿಡಿಗಳಲ್ಲಿ ತೊಡಗಿವೆ. ಈರುಳ್ಳಿಯ ಬೆಲೆಯನ್ನು ಕಡಿಮೆ ಮಾಡಲು, ಲಿಂಬೆ, ಬೀಟ್ರೂಟ್, ಹಾಗೂ ಸೊಪ್ಪು ತರಕಾರಿಗಳ ಬೆಲೆಯನ್ನು ಏರಿಸುತ್ತವೆಯೆಂದು ಫ್ರೆಶ್‌ಫಲ್ ಸಬ್ಜಿಯ ಗುಪ್ತಾ ತಿಳಿಸಿದ್ದಾರೆ.

Write A Comment