ರಾಷ್ಟ್ರೀಯ

ಪಾಕಿಸ್ತಾನದಿಂದ ಗುಂಡಿನ ದಾಳಿ: ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ

Pinterest LinkedIn Tumblr

rahul_______________ಜಮ್ಮು, ಆ.26: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಬಾಲಕೋಟೆಯ ಪಾಕಿಸ್ತಾನದಿಂದ ಗುಂಡಿನ ದಾಳಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಕದನ ವಿರಾಮ ಉಲ್ಲಂಘನೆಯ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದ್ದಾರೆ.
ಇಲ್ಲಿನ ಜನರು ಬಹಳಷ್ಟು ಹೆದರಿದ್ದಾರೆ ಹಾಗೂ ಚಿಂತೆಗೊಳಗಾಗಿದ್ದಾರೆಂದು ರಾಹುಲ್ ಬಾಲಕೋಟೆಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಇಲ್ಲಿನ ಜನರು ಬಂಕರ್‌ಗಳನ್ನೂ, ತಮಗೆ ಹಾಗೂ ತಮ್ಮ ಜಾನುವಾರುಗಳಿಗೆ ವಿಮೆಯನ್ನು ಬಯಸುತ್ತಿದ್ದಾರೆಂದು ಅವರು ಹೇಳಿದರು.
ರಾಹುಲ್, ನಾಗರಿಕರು ಹಾಗೂ ಗಡಿಯಾಚೆಗಿನ ದಾಳಿ ಸಂತ್ರಸ್ತರೊಂದಿಗೆ ಅವರ ಪರಿಸ್ಥಿತಿಯ ಕುರಿತು ಸುದೀರ್ಘ ಮಾತುಕತೆ ನಡೆಸಿದರು. ಬಳಿಕ ಅವರು ಸತತ ಕದನ ವಿರಾಮ ಉಲ್ಲಂಘನೆಯಿಂದ ಬಾಧಿತವಾಗಿರುವ ಇತರ ಪ್ರದೇಶಗಳಿಗೆ ಭೇಟಿ ನೀಡಿದರು.

ಈ ಮೊದಲು, ಬಿಜೆಪಿಯು ರಾಹುಲ್‌ರ ಜಮ್ಮು-ಕಾಶ್ಮೀರ ಭೇಟಿಯನ್ನು ಖಂಡಿಸಿದ್ದು, ಅವರು ಗಡಿ ವಿವಾದವನ್ನು ‘ರಾಜಕೀಯ ಗೊಳಿಸಲು’ ಪ್ರಯತ್ನಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿತ್ತು. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಳ ಹಾಗೂ ಗಡಿಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚಳಕ್ಕಾಗಿ ಕೇಂದ್ರ ಹಾಗೂ ರಾಜ್ಯದ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರಗಳ ವಿರುದ್ಧ ಹರಿಹಾಯ್ದಿದ್ದ ಕಾಂಗ್ರೆಸ್, ಸರಕಾರವು ಈ ಘಟನೆಗಳನ್ನು ನಿಯಂತ್ರಿಸಲು ವಿಫಲವಾಗಿದೆಯೆಂದು ಆರೋಪಿಸಿದೆ.

Write A Comment