ರಾಷ್ಟ್ರೀಯ

ರಾಸಲೀಲೆಯ ವಿಡಿಯೋ ಕಾರಣಕ್ಕೆ ದುಬಾರಿ ಬೆಲೆ ತೆತ್ತ ಯುವ ಜೋಡಿ

Pinterest LinkedIn Tumblr

youtubeಆಗ್ರಾ: ಪರಸ್ಪರ ಪ್ರೀತಿಸುತ್ತಿದ್ದ ಯುವಕ- ಯುವತಿ ತಮ್ಮ ಖಾಸಗಿ ಕ್ಷಣದ ವಿಡಿಯೋವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಮತ್ತೊಬ್ಬ ವ್ಯಕ್ತಿ ಬಯಲು ಮಾಡಿರುವ ಕಾರಣ ದುಬಾರಿ ಬೆಲೆ ತೆರಬೇಕಾಗಿ ಬಂದಿದೆ.

ಉತ್ತರ ಪ್ರದೇಶದ ಆಗ್ರಾ ಸಮೀಪದ ನಯಕ್ ಮಂಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂದೇ ಕೋಮಿಗೆ ಸೇರಿದ 20 ರ ಹರೆಯದ ಯುವಕ- ಯುವತಿ ತಮ್ಮ ಮನೆಯಲ್ಲಿ ರಾಸಲೀಲೆಯಲ್ಲಿ ತೊಡಗಿದ್ದ ವೇಳೆ ಅದನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಅದನ್ನು ಉಪಾಯವಾಗಿ ಸಂಪಾದಿಸಿದ್ದ ಯುವತಿಯ ಸಹೋದರಿಯ ಮಾಜಿ ಪ್ರಿಯಕರ ಈ ಹಿಂದೆ ತನ್ನ ಮೇಲೆ ಲೈಂಗಿಕ ಕಿರುಕುಳದ ದೂರು ನೀಡಿದ್ದ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಅದನ್ನು ಅಶ್ಲೀಲ ವಿಡಿಯೋ ತಯಾರಿಸುವವನಿಗೆ ನೀಡಿ ಸಿ.ಡಿ. ಗಳನ್ನು ಮಾಡಿಸಿದ್ದು, ಇದೀಗ ಸಾಮಾಜಿಕ ಜಾಲ ತಾಣ ಯೂ ಟ್ಯೂಬ್ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿದೆ.

ಈ ವಿಡಿಯೋ ಕಾರಣಕ್ಕಾಗಿ ಗರಂ ಆಗಿರುವ ಪಂಚಾಯಿತಿ ಮುಖಂಡರು, ರಾಸಲೀಲೆಯಲ್ಲಿ ತೊಡಗಿದ್ದ ಯುವಕ- ಯುವತಿಗೆ ಈಗ ಗ್ರಾಮ ತೊರೆಯುವಂತೆ ಆದೇಶಿಸಿದ್ದಾರೆ. ಇವರುಗಳ ಈ ಕೃತ್ಯದಿಂದ ತಮ್ಮ ಕೋಮಿನ ಗೌರವಕ್ಕೆ ಧಕ್ಕೆ ತಂದಿರುವುದಾಗಿ ಅಭಿಪ್ರಾಯಪಟ್ಟಿರುವ ಪಂಚಾಯಿತಿ, ಯುವಕ- ಯುವತಿ ಹಾಗೂ ಅವರ ಕುಟುಂಬಸ್ಥರು ಅಂಗಲಾಚಿ ಬೇಡಿಕೊಂಡರೂ ಕರಗದೆ ತನ್ನ ತೀರ್ಮಾನಕ್ಕೆ ಬದ್ದವಾಗಿದೆ. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಡಿಯೋ ಬಹಿರಂಗಪಡಿಸಿದವನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪಂಚಾಯಿತಿ ತೀರ್ಮಾನದ ಕುರಿತಂತೆ ದೂರು ನೀಡಲು ಪೊಲೀಸರು ಸೂಚಿಸಿದ್ದರೂ ಯುವಕ- ಯುವತಿ ಅದಕ್ಕೆ ಮುಂದಾಗಿಲ್ಲ. ಯುವಕ ಸ್ಥಿತಿವಂತ ಕುಟುಂಬಕ್ಕೆ ಸೇರಿದವನಾಗಿರುವ ಕಾರಣ ಪಂಚಾಯಿತಿ ತೀರ್ಮಾನಕ್ಕೆ ಬದ್ದನಾಗಿ ಈಗಾಗಲೇ ಬೇರೆಡೆ ನೆಲೆಸಿದ್ದು, ಯುವತಿ ಬಡ ಕುಟುಂಬದವಳಾದ ಕಾರಣ ಇನ್ನೂ ನೆಲೆ ಕಂಡುಕೊಳ್ಳಬೇಕಿದೆ. ಪಂಚಾಯಿತಿ ಆಕೆಗೆ 10 ದಿನಗಳ ಕಾಲಾವಕಾಶ ನೀಡಿದೆ ಎಂದು ತಿಳಿದುಬಂದಿದೆ.

Write A Comment