ಪರ ಪುರುಷನ ಸಹವಾಸ ಮಾಡಿದ ಕಾರಣಕ್ಕೆ ವಿಚ್ಛೇದನವಾದ ಸಂದರ್ಭದಲ್ಲಿ ಪತ್ನಿಗೆ ಜೀವನಾಂಶ ನೀಡಬೇಕೆಂದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೆಂಡತಿಯ ಪೋಷಣೆ ಹೇಗೆ ಗಂಡನಾದವನ ಕರ್ತವ್ಯವೋ ಅದೇ ರೀತಿ ಪರ ಪುರುಷನೊಡನೆ ಅನೈತಿಕ ಸಂಬಂಧ ಬೆಳೆಸದೆ ಗಂಡನಿಗೆ ನಿಷ್ಠಳಾಗಿರುವ ಬಾಧ್ಯತೆ ಪತ್ನಿಯಾದವಳಿಗಿದ್ದು ಇಂತಹ ಹೆಂಡತಿಗೆ ಮಾಜಿ ಗಂಡನಿಂದ ಜೀವನಾಂಶ ಕೇಳುವ ಯಾವುದೇ ಹಕ್ಕು ಪಡೆಯುವುದಿಲ್ಲ . ಬದಲಾಗಿ ಆಕೆ ತಾನು ವಿವಾಹಬಾಹಿರ ಸಂಬಂಧ ಇಟ್ಟುಕೊಂಡ ವ್ಯಕ್ತಿಯಿಂದಲೇ ಜೀವನ ನಿರ್ವಹಣೆಗೆ ಹಣ ಪಡೆಯಬಹುದಾಗಿದೆ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
ಅನೈತಿಕ ಸಂಬಂಧ ಹೊಂದಿದ್ದ ಹೆಂಡತಿಗೆ 2011ರಲ್ಲಿ ವಿಚ್ಛೇದನ ನೀಡಿದ್ದ ಸರಕಾರಿ ಉದ್ಯೋಗಿಯೊಬ್ಬರಿಗೆ ಕೌಟುಂಬಿಕ ನ್ಯಾಯಾಲಯ ಮಾಜಿ ಹೆಂಡತಿಗೆ ಪ್ರತಿ ತಿಂಗಳು 1,000 ರೂ. ಜೀವನಾಂಶ ಕೊಡಲು ಆದೇಶಿಸಿತ್ತು. ಈ ತೀರ್ಪಿನ ವಿರುದ್ಧ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಪು ನೀಡಿದೆ.