ಮಹಾರಾಷ್ಟ್ರ ಕರಾವಳಿ ತೀರದಲ್ಲಿ ಬರೋಬ್ಬರಿ 120 ತುಂಬಿದ ತೈಲ ಬ್ಯಾರೆಲ್‌ಗಳು ಸಮುದ್ರದಲ್ಲಿ ತೇಲಿಬಂದ ಘಟನೆ ವರದಿಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಮುಂಬೈಯಿಂದ 135 ಕಿ.ಮೀ.ದೂರದಲ್ಲಿರುವ ಕೊಂಕಣ್ ಪ್ರಾಂತ್ಯದಲ್ಲಿನ ಕಾಶೀದ್ ಬೀಚ್‌ನಲ್ಲಿ 200 ಲೀಟರ್‌ನ ಕಬ್ಬಿಣದ ಡ್ರಮ್‌ಗಳು ಅಲೆಗಳ ಮೂಲಕ ತೇಲಿ ಬಂದು ದಡಕ್ಕೆ ಬಿದ್ದಿದೆ. ಈ ಘಟನೆಯಿಂದ ಪ್ರದೇಶದ ಸಮುದ್ರ ತೀರಗಳಲ್ಲಿ ಬಾರೀ ತೈಲ ಸೋರಿಕೆಯಾಗುವ ಆತಂಕವನ್ನು ಮಹಾರಾಷ್ಟ್ರ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ನಡುವೆ ಎಲ್ಲಾ ಬ್ಯಾರಲ್ ಗಳೂ ಸೀಲಾಗಿದ್ದು ಹಾಗಾಗಿ ಸೋರಿಕೆ ಆಗಿರುವ ಪ್ರಮಾಣ ಕಡಿಮೆ ಎನ್ನಲಾಗುತ್ತಿದೆ
ಅಲ್ಲದೇ ಈ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳ ಕರಾವಳಿ ರಕ್ಷಣಾ ಪಡೆಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು ಬ್ಯಾರೆಲ್ ಗಳು ಇಲ್ಲಿಗೆ ಬರಲು ಕಾರಣವೇನು..? ಹಾಗೂ ಇದರ ಹಿಂದೆ ಯಾವುದಾದರೂ ವ್ಯಕ್ತಿಗಳ ಕೈವಾಡ ಇದೆಯೇ ಎಂಬ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ.