ಭಾನುವಾರ 47ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರುವ ಮೂಲಕ ತಮ್ಮ ಮುತ್ಸದ್ದಿತನವನ್ನು ಪ್ರದರ್ಶಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಮೋದಿ, ಉತ್ತಮ ಆರೋಗ್ಯ, ಆಯಸ್ಸು ಲಭಿಸಲಿ ಎಂದು ಹಾರೈಸಿದ್ದು ಪ್ರಧಾನಿ ಹಾರೈಕೆಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ದೆಹಲಿ ಪರಿಸ್ಥಿತಿ ಕುರಿತು ಕೆಲವೊಂದು ವಿಚಾರಗಳನ್ನು ಚರ್ಚಿಸುವ ಸಲುವಾಗಿ ಶೀಘ್ರದಲ್ಲೆ ತಮ್ಮನ್ನು ಭೇಟಿಯಾಗಲಿರುವೆ ಎಂದು ಸಹ ಕೇಜ್ರಿವಾಲ್ ಟ್ಚೀಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಮೋದಿ ಸರ್ಕಾರದ ವಿರುದ್ದ ಜಾಹಿರಾತಿನ ಸಮರವನ್ನೂ ನಡೆಸಿದ ಕೇಜ್ರಿ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರುವ ಮೂಲಕ ತಮ್ಮ ರಾಜಕೀಯ ಪ್ರಬುದ್ದತೆಯನ್ನು ಮೋದಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.