ಬಿಜೆಪಿಯ ‘ಬೆಂಕಿಯ ಚೆಂಡು’ ಎಂಬ ಖ್ಯಾತಿ ಪಡೆದಿರುವ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಪುಸ್ತಕ ಬರೆಯಲಿದ್ದಾರೆ.
ಹೌದು. ಸ್ವತಃ ಮೋದಿ ಅವರ ಪ್ರಭಾವಕ್ಕೆ ಒಳಗಾಗಿರುವ ಉಮಾಭಾರತಿ ಮೋದಿ ಅವರ ವಿಚಾರ ಧಾರೆಯನ್ನು ದೇಶದ ಜನತೆಗೆ ತಿಳಿಸುವ ಸಲುವಾಗಿ ಈ ಚಿಂತನೆ ನಡೆಸಿದ್ದು ಸದ್ಯದಲ್ಲಿಯೇ ಕಾರ್ಯರೂಪಕ್ಕೆ ತರಲಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಉಮಾ ಭಾರತಿ ಅವರು ಸಚಿವೆಯಾಗುವ ಮುನ್ನ ಮೋದಿ ಅವರ ಕುರಿತು ಅಷ್ಟಾಗಿ ತಿಳುವಳಿಕೆ ಇರಲಿಲ್ಲ. ಸಚಿವೆಯಾದ ನಂತರ ಅವರೊಂದಿಗೆ ನಿರಂತರ ಮಾತುಕತೆಗಳನ್ನು ನಡೆಸುತ್ತಿದ್ದು, ಅವರ ವಿಚಾರಧಾರೆಗಳಿಂದ ಪ್ರಭಾವಿತಳಾಗಿದ್ದೇನೆ. ಅಲ್ಲದೇ ನರೇಂದ್ರ ಮೋದಿ ಅಭಿವೃದ್ಧಿ ರಾಜಕಾರಣದಲ್ಲಿ ಹೊಸ ಶಖೆಯನ್ನು ಹುಟ್ಟು ಹಾಕುವ ಮೂಲಕ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಧರ್ಮ ಮತ್ತು ಜಾತಿಗಳನ್ನು ಹೊರತು ಪಡಿಸಿ ಬಡನ ನಿರ್ಮೂಲನೆಗೊಳಿಸುವತ್ತ ಮತ್ತು ಅಭಿವೃದ್ಧಿಯೆಡೆಗೆ ಅವರು ಒತ್ತು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು ಈ ಕುರಿತು ದೇಶದ ಎಲ್ಲ ಜನತೆಗೆ ತಿಳಿಯಬೇಕು ಎಂಬುದೇ ನನ್ನ ಅಭಿಲಾಷೆ ಎಂದು ತಿಳಿಸಿದ್ದಾರೆ.