ರಾಷ್ಟ್ರೀಯ

ಕೂದಲು ಕಾಂತಿಗೆ…

Pinterest LinkedIn Tumblr

kudaluಕರಿಬಣ್ಣದ ಎಳ್ಳನ್ನು ನೆನೆಸಿ ನುಣ್ಣಗೆ ರುಬ್ಬಿ ಸೀಗೇಕಾಯಿ ಪುಡಿಯ ಜೊತೆ ಸೇರಿಸಿ ತಲೆ ತೊಳೆಯುವುದರಿಂದ ಕೂದಲು ಕಾಂತಿಯುತವಾಗುತ್ತದೆ.
ಕೂದಲು ನೆರೆ
ಎರಡು ಚಮಚ ತುಳಸಿ ಪುಡಿ ಮತ್ತು ಒಣಗಿದ ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ನೀರಿನಲ್ಲಿ ನೆನೆಹಾಕಿ. ಮಾರನೆಯ ದಿನ ಅದನ್ನು ತಲೆಗೆ ಹಚ್ಚಿ ಸ್ವಲ್ಪ ತಡೆದು ತಲೆಗೆ ಸ್ನಾನ ಮಾಡಬೇಕು. ಹೀಗೆ ಸ್ವಲ್ಪದಿನ ಮಾಡುತ್ತಿದ್ದರೆ ಕೂದಲು ಬೆಳ್ಳಗಾಗಿರುವುದು ಕಪ್ಪಾಗುತ್ತದೆ ಮತ್ತು ಕೂದಲು ಉದುರುವಿಕೆ ನಿಲ್ಲುತ್ತದೆ.

* ವಾರಕ್ಕೊಮ್ಮೆ ಮಾಡುವ ಎಣ್ಣೆ ಮಸಾಜ್​ನಿಂದಲೂ ತಲೆಹೊಟ್ಟು ಪರಿಹಾರ ಆಗುತ್ತದೆ.

* ಒಂದು ಬಟ್ಟಲು ಎಳನೀರಿಗೆ ನಿಂಬೆರಸವನ್ನು ಹಿಂಡಿ, ತಲೆಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ, ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲುದುರುವಿಕೆ ನಿಲ್ಲುತ್ತದೆ.

* ಹಾಲಿನೊಂದಿಗೆ ಕೊಬ್ಬರಿ ಎಣ್ಣೆ ಸೇರಿಸಿ ಕೂದಲಿನ ತುದಿಗೆ ಹಚ್ಚಿ ಒಂದು ಗಂಟೆಯ ಬಳಿಕ ಸ್ನಾನ ಮಾಡುವುದರಿಂದ ಕೂದಲು ಟಿಸಿಲೊಡೆಯುವುದಿಲ್ಲ.

* ಕೊಬ್ಬರಿ ಎಣ್ಣೆಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ. ಮೆಂತ್ಯೆ ಬೆರೆಸಿ ಮತ್ತೆ ಕುದಿಸಿ ಆರಲು ಬಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ನಿಯಮಿತವಾಗಿ ಉಪಯೋಗಿಸುವುದರಿಂದ ಕೂದಲು ಟಿಸಿಲೊಡೆಯುವುದು ಕಡಿಮೆಯಾಗುತ್ತದೆ.

* ಮೆಂತ್ಯೆ ಸೊಪ್ಪನ್ನು ಮೊಸರಿನೊಂದಿಗೆ ರುಬ್ಬಿ ಒಂದು ಗಂಟೆಯ ಕಾಲ ಹಚ್ಚಿ ತೊಳೆಯಿರಿ. ತಲೆಹೊಟ್ಟು ಮಾಯವಾಗುತ್ತದೆ.

* ಬೇವನ್ನು ಮೊಸರಿನೊಂದಿಗೆ ರುಬ್ಬಿ ಹಚ್ಚಿದರೂ ಹೊಟ್ಟಿನ ಸಮಸ್ಯೆ ಪರಿಹಾರವಾಗುತ್ತದೆ.

Write A Comment