ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ವಿವಾದದ ಸುದ್ದಿಯಾಗಿದ್ದಾರೆ. ಶನಿವಾರ ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಶಾಲಾ ಮಕ್ಕಳು ರಾಷ್ಟ್ರಾಭಿಮಾನವನ್ನು ಪ್ರತಿನಿಧಿಸುವ ಪ್ರದರ್ಶನಗಳನ್ನು ನೀಡದೆ ಮುಖ್ಯಮಂತ್ರಿ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನ ನೀಡಿರುವುದನ್ನು ಹಲವರು ಕಟುವಾಗಿ ಟೀಕಿಸಿದ್ದಾರೆ.
ಆಪ್ ನ ಮಾಜಿ ಮುಖಂಡರಾದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಇದನ್ನು ವಿರೋಧಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಬಂದಾಗ ನನಗೆ ಈ ಬಗ್ಗೆ ಅರಿವು ಇರಲಿಲ್ಲ. ದೆಹಲಿ ಸರ್ಕಾರದ ಯಾವುದೇ ಮುಖ್ಯ ಅತಿಥಿಗಳಿಗೆ ಸಂಬಂಧಪಟ್ಟ ಪ್ರದರ್ಶನ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಇದು ಕೆಟ್ಟ ಪದ್ಧತಿ. ಮುಂದಿನ ದಿನಗಳಲ್ಲಿ ಇದನ್ನು ನಿಲ್ಲಿಸಲು ಸೂಚನೆ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.