ರಾಷ್ಟ್ರೀಯ

ದೇಶವನ್ನು ಲೂಟಿ ಮಾಡಲು ಬಿಡಲ್ಲ: ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Pinterest LinkedIn Tumblr

Modi_independencedayನವದೆಹಲಿ: ದೇಶ 69ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದು, ದೇಶದ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳನ್ನುದ್ದೇಶಿಸಿ ತಮ್ಮ ಚೊಚ್ಚಲ ಭಾಷಣವನ್ನು  ಮಾಡಿದರು. ಅವರು ಮಾತನಾಡಲಿರುವ ಮಾತುಗಳ ಬಗ್ಗೆ ದೇಶಾದ್ಯಂತ ಕುತೂಹಲವಿದ್ದು ಜನತೆಗೆ 69ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಅವರ ಭಾಷಣದ ಮುಖ್ಯಾಂಶಗಳು…

ಆಗಸ್ಟ್ 15ರ ಮುಂಜಾನೆ ಮಾಮೂಲಿ ದಿನವಾಗಿಲ್ಲ, 125 ಕೋಟಿ ಭಾರತೀಯರ ಕನಸುಗಳ ಮುಂಜಾನೆಯಾಗಿದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕರು ಪ್ರಾಣತೆತ್ತಿದ್ದಾರೆ. ದೇಶಕ್ಕಾಗಿ ಪ್ರಾಣತೆತ್ತ ವೀರರಿಗೆ ನನ್ನ ಸಲ್ಯೂಟ್
ಭಾರತದ ವಿವಿಧತೆ ಬಗ್ಗೆ ವಿಶ್ವದೆಲ್ಲೆಡೆ ಗುಣಗಾನವಾಗುತ್ತಿದೆ. ದೇಶ ವಿಭಜನೆ ಮಾಡುವವರಿಗೆ ನಮ್ಮ ದೇಶದಲ್ಲಿ ಜಾಗವಿಲ್ಲ
ಭಾರತದ ಮೂಲೆಮೂಲೆಯಲ್ಲೂ ಜನರಲ್ಲಿ ಒಗ್ಗಟ್ಟಿದೆ. ಜನರ ಒಗ್ಗಟ್ಟು ಭಾರತೀಯರ ಅತಿದೊಡ್ಡ ಶಕ್ತಿ

ನಮ್ಮಲ್ಲಿ ಟೀಂ ಇಂಡಿಯಾ ಮಾದರಿಯಲ್ಲಿ ವ್ಯವಸ್ಥೆ ಇದೆ. ನಮ್ಮದು 125 ಕೋಟಿ ಭಾರತೀಯರ ಟೀಮ್

ನಾವು ಜಾತಿಯತೆ ಮತ್ತು ಕೋಮುವಾದವನ್ನು ಹಿಮ್ಮೆಟ್ಟಿಸಬೇಕಾಗಿದೆ.
ಜಾತಿವಾದ, ಕೋಮುವಾದಕ್ಕೆ ಭಾರತದಲ್ಲಿ ಎಂದಿಗೂ ಸ್ಥಳವಿಲ್ಲ.
ಟೀಂ ಇಂಡಿಯಾದ ಒಂದೇ ಜನಾದೇಶವಿದೆ. ಎಲ್ಲ ವ್ಯವಸ್ಥೆ ಯೋಜನೆ ಬಡವರಿಗೆ ಉಪಯೋಗವಾಗಬೇಕು
ಭಾರತದ ಜನಮನದಲ್ಲಿ ಸರಳತೆ ತುಂಬಿದೆ. ಬಡವರನ್ನು ಗಮನದಲ್ಲಿಟ್ಟು ಯೋಜನೆ ರೂಪಿಸಲಾಗುತ್ತಿದೆ. ದೇಶದ ಮೂಲೆಮೂಲೆಗೂ ಸರ್ಕಾರದ ಸೌಲಭ್ಯ ಸಿಗುತ್ತಿದೆ. ಜನರ ಅಭಿವೃದ್ಧಿ ದೃಷ್ಟಿಯಲ್ಲಿರಿಸೇ ಯೋಜನೆಗಳ ಜಾರಿ
ಬಡವರ ಶ್ರೋಯೋಭಿವೃದ್ಧಿಗಾಗಿ ಜನಧನ ಯೋಜನೆ ಜಾರಿ. ಜನಧನ ಯೋಜನೆಯಡಿ 17 ಕೋಟಿ ಖಾತೆ ತೆರೆದಿದ್ದಾರೆ. 17 ಕೋಟಿ ಖಾತೆಗಳಲ್ಲಿ 20 ಸಾವಿರ ಕೋಟಿ ಹಣ ಸಂಗ್ರಹ
ಬ್ಯಾಂಗ್ ಗಳಲ್ಲಿ ಖಾತೆ ತೆರೆಯಲು ಬಡವರಿಗೆ ಅವಕಾಶ. ಆರ್ಥಿಕ ಯೋಜನೆ ತರುತ್ತೇವೆಂಬ ನಮ್ಮ ಭರವಸೆ ಈಡೇರಿದೆ. ಬಡವರ ಆರ್ಥಿಕ ಸ್ಥಿತಿ ಬಲಪಡಿಸಲು ಸರ್ಕಾರ ಬದ್ಧ
ಬಡವರ ಶಕ್ತಿಯಿಂದಲೇ ಟೀಂ ಇಂಡಿಯಾ ಮುಂದುವರೆಯುತ್ತಿದೆ.
ಮೊದಲು ಬಡವರಿಗೆ ಬ್ಯಾಂಕ್ ಬಾಗಿಲು ಮುಚ್ಚಿರುತ್ತಿತ್ತು. ದೇಶದ ಬಡಜನತೆಗೆ ಬ್ಯಾಂಕ್ ಬಾಗಿಲು ತೆರೆದಿರಲಿಲ್ಲ. ನಾವು ಅಂದೇ ಒಂದು ಮಹತ್ವದ ತೀರ್ಮಾನ ಮಾಡಿದೆವು. ಈ ಹಿನ್ನೆಲೆಯಲ್ಲಿ ಜನಧನ ಯೋಜನೆ ಜಾರಿ ಮಾಡಿದೆವು.
60 ವರ್ಷಗಳಿಂದ 40 ಕೋಟಿ ಜನರ ಬಳಿ ಖಾತೆ ಇರಲಿಲ್ಲ. ಆರ್ಥಿಕವಾಗಿ ಜನಧನ ಯೋಜನೆ ದೊಡ್ಡ ಬದಲಾವಣೆ. ಹೊಸ ಸಾಮರ್ಥ್ಯದೊಂದಿಗೆ ನಮ್ಮ ದೇಶ ಮುನ್ನಡೆಯುತ್ತಿದೆ.
ಕಳೆದ ಒಂದು ವರ್ಷದಲ್ಲಿ ಹೊಸ ವಿಶ್ವಾಸದ ವಾತಾವರಣ. ಯಾರೂ ಕೂಡ ಬಡವನಾಗಿ ಇರಲು ಇಚ್ಚಿಸುವುದಿಲ್ಲ. ಹೀಗಾಗಿ ಬಡವರ ಗಮನದಲ್ಲಿಟ್ಟುಕೊಂಡು ಯೋಜನೆ.

ನಾವು ನೀಡಿದ್ದ ಭರವಸೆಯಂತೆ ಸಾಮಾಜಿಕ ಯೋಜನೆಗಳು. ಕೇವಲ ರು.12ಗಳಲ್ಲಿ ಜನರಿಗೆ ಜೀವನ ಸುರಕ್ಷೆ ಕೊಟ್ಟೆವು. 100 ದಿವಸದ ಯೋಜನೆ 10 ಸಾವಿರ ಕೋಟಿ ಜನರನ್ನ ತಲುಪಿದೆ. ಬಡವರಿಗಾಗಿ ಪ್ರಧಾನಿ ಜೀವನ ಜ್ಯೋತಿ ವಿಮಾ ಯೋಜನೆ
ಪಿಎಫ್ ಗೆ ಒಂದೇ ನಂಬರ್ ನೀಡುವ ಮೂಲಕ ವ್ಯವಸ್ಥೆ. ಉದ್ಯೋಗ ಬದಲಾದರೂ ನಂಬರ್ ಒಂದೇ ಉಳಿಯುತ್ತದೆ. ಈ ಮೂಲಕ ಕಾರ್ಮಿಕ ವರ್ಗದವರಿಗೆ ಅನುಕೂಲ ಮಾಡಿದ್ದೇವೆ.
ಸ್ವಚ್ಛಭಾರತ ಅಭಿಯಾನ ನಮ್ಮ ಅತಿದೊಡ್ಡ ಸಾಧನೆ. ದೇಶದಲ್ಲಿ ಸ್ವಚ್ಛತಾ ಕೆಲಸ ಈಗಷ್ಟೇ ಆರಂಭವಾಗಿದೆ.

ಕಾನೂನು ರೂಪಿಸುವುದೇ ಒಂದು ಹವ್ಯಾಸವಾಗಿಬಿಟ್ಟಿದೆ. ಉತ್ತಮ ಆಡಳಿತಕ್ಕೆ ಅತಿ ಹೆಚ್ಚು ಕಾನೂನುಗಳು ಬೇಕಾಗಿಲ್ಲ.

ನಾವೂ ಕೂಡ ಸಹಸ್ರಾರು ಶೌಚಾಲಯ ನಿರ್ಮಿಸಿದ್ದೇವೆ. ಶೌಚಾಲಯಗಳ ನಿರ್ಮಾಣದಲ್ಲಿ ನಾವು ಸಫಲರಾಗಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ. ಇದಿರಂದ ಶಾಲೆಗೆ ಬರುವ ಬಾಲಕಿಯರ ಸಂಖ್ಯೆ ಹೆಚ್ಚಾಯಿತು.

ಶೀಗ್ರವೇ ನಾವು ನಮ್ಮ ಗುರಿ ತಲುಪುವ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಯೋಜನೆಗೆ ಕೈಜೋಡಿಸಿದ ಎಲ್ಲಿರಿಗೂ ವಂದನೆ.
ದೇಶದ ಕಾರ್ಮಿಕರ ಅಭಿವೃದ್ಧಿ ನಾವು ಪಣ ತೊಟ್ಟಿದ್ದೇವೆ.
ಭ್ರಷ್ಟಾಚಾರ ಮಾಯವಾಗುತ್ತಿದ್ಯಾ, ಇಲ್ಲಾ ಎಂದು ಕೇಳಿದ್ದೆ. ಶೇ.50ಕ್ಕೂ ಹೆಚ್ಚು ಜನರಿಂದ ಪಾಸಿಟಿವ್ ಪ್ರತ್ರಿಕ್ರಿಯೆ ಸಿಕ್ಕಿದೆ.

ಇತ್ತೀಚೆಗಷ್ಟೇ ನಾವು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಿದ್ದೆವು. ಇದರಿಂದ ಬರೋಬ್ಬರಿ ರು. 3 ಲಕ್ಷ ಕೋಟಿ ಲಾಭವಾಗಿದೆ. ಕಲ್ಲಿದ್ದಲು ರಾಷ್ಟ್ರದ ಸಂಕಲ್ಪ  ಶಕ್ತಿಯಾಗಿದೆ.
ಗ್ಯಾಸ್ ಸಬ್ಸಿಡಿ ಹೆಸರಿನಲ್ಲಿ ಹಣ ಸೋರಿಕೆಯಾಗುತ್ತಿತ್ತು. ಪ್ರತಿ ವರ್ಷ 12 ಸಾವಿರ ಕೋಟಿ ವ್ಯರ್ಥವಾಗುತ್ತಿತ್ತು. ಬಡವರಿಗೆಂದು ಗ್ಯಾಸ್ ಸಬ್ಸಿಡಿ ಯೋಜನೆ ರೂಪಿಸಲಾಗಿತ್ತುತ. ಶ್ರೀಮಂತಿರಿಗೂ ಸಬ್ಸಿಡಿ ನೀಡಲಾಗುತ್ತಿತ್ತು. ಇದನ್ನು ನಾವು ಈಗ ತಪ್ಪಿಸಿದ್ದೇವೆ.
ಕಪ್ಪುಹಣ ವಾಪಸ್ ತರಲು ಹಲವು ದೇಶಗಳೊಂದಿಗೆ ಚರ್ಚೆ. ಕಪ್ಪು ಹಣ ತಡೆಗೆ ಕಠಿಣ ಕಾನೂನುಗಳನ್ನು ರೂಪಿಸಿದೆವು. ಹಲವರು ಈ ಕಾನೂನಿಗಳಿಗೆ ವಿರೋಧ ವ್ಯಕ್ತಪಡಿಸಿದರು. ಕಲ್ಲಿದ್ದಲು, ಸ್ಪೆಕ್ಟ್ರಂ ಹರಾಜಿನ ಬಗ್ಗೆ ನಿರ್ಧಾರ ಮಾಡಿದೆವು.
ನಮ್ಮ ಕೆಲ ಕ್ರಮಗಳಿಂದ ಹಣದುಬ್ಬರ ನಿಯಂತ್ರಣದಲ್ಲಿದೆ. ಎರಡಂಕಿಯಿದ್ದ ಹಣದುಬ್ಬರ ಇಂದು ಒಂದಂಕಿಗೆ ಇಳಿದಿದೆ. ದೇಶಧ ಆರ್ಥಿಕ ಅಭಿವೃದ್ಧಿ ಪ್ರಮಾಣ ಹೆಚ್ಚುತ್ತಲೇ ಸಾಗಿದೆ.
ನಮ್ಮ ವಿರುದ್ಧ 1 ಪೈಲೆಯ ಭ್ರಷ್ಟಾಚಾರ ಆರೋಪವಿಲ್ಲ. ಎಫ್ ಎಂ ರೇಡಿಯೋ ಹರಾಜು ತಡೆಗೆ ಒತ್ತಡವಿತ್ತು. ಕಪ್ಪು ಹಣ ತಡೆಗೆ ಕಠಿಣ ನಿಲುವು ತಳೆದಿದ್ದೇವೆ.

ಹಲವು ದೇಶಗಳೊಂದಿಗೆ ಕೆಲವು ಅಕ್ರಿಮೆಂಟ್ ಸಹ ಆಗಿದೆ. ಕಪ್ಪುಹಣ ತಡೆಗಟ್ಟಲು ಹಲವು ಕಠಿಣ ಕ್ರಮ ಜಾರಿಯಾಗಿವೆ. ಹಲವರು ನಮ್ಮ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದ್ದರು. ಆದರೆ ಯಾರ ವಿರೋಧಕ್ಕೂ ನಾವು ಜಗ್ಗಲಿಲ್ಲ, ಬಗ್ಗಲಿಲ್ಲ.
ಅಧಿಕಾರಕ್ಕೆ ಬಂದ ಕೂಲಡೇಲ ಎಶ್ ಐಟಿ ರಚನೆ ಮಾಡಿದ್ದೆವು. ಕಪ್ಪುಹಣ ವಾಪಸ್ ತರುವ ಸಂಬಂಧ ಎಶ್ ಐಟಿ ರಚನೆ. ಕಪ್ಪುಹಣ ವಾಪಸ್ ತರಲು ನಾನಾ ಕ್ರಮ ಕೈಗೊಂಡಿದ್ದೇವೆ. ಅಮೆರಿಕ ಸೇರಿ ಹಲವು ದೇಶಗಳು ನಮಗೆ ಸಹಕರಿಸುತ್ತಿವೆ.
ರೈತರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸುತ್ತೇವೆ. ಪ್ರತಿ ರೈತನ ಗದ್ದೆಗೆ ನೀರು ತಲುಪಿಸುವುದು ನಮ್ಮ ಗುರಿ. ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆ ಜಾರಿ ಮಾಡಿದ್ದೇವೆ. ಮುಂದೆಯೂ ರೈತರ ಸಂಪೂರ್ಣ ಅಭಿವೃದ್ಧಿಯೇ ಗುರಿ. ದೇಶಧ ಪ್ರತಿಯೊಬ್ಬ ರೈತನ ಅಭಿವೃದ್ಧಿಗೆ ಒತ್ತು.
ಹೆಚ್ಚುಚ್ಚು ಹಸಿರು ಬೆಳೆಸುವಂತೆ ಎಲ್ಲರಿಗೂ ಕರೆ ನೀಡಲಾಗಿದೆ. ದೇಶದ ಹಸಿರು ಉಳಿಸಿ, ಜೀವ ಉಳಿಸಿ ಎಂದು ಕರೆ ನೀಡಿದ ಪ್ರಧಾನಿ.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದ್ಲು ವರ್ಷಕ್ಕೆ 800 ಅಧಿಕಾರಿಗಳ ವಿರುದ್ಧ ಕೇಸ್. ನಾವು ಬಂದ್ಮೇಲೆ 10 ತಿಂಗಳಲ್ಲಿ 1,800 ಅಧಿಕಾರಿಗಳ ವಿರುದ್ಧ ಕೇಸ್ ದಾಖಲು
ಬೇವಿನ ಕೋಟಿಂಗ್ ನಿಂದ ಯೂರಿಯಾ ಕಳವಿಗೆ ತಡೆ. 18500 ಗ್ರಾಮಗಳಲ್ಲಿ ಇಂದಿಗೂ ಸಮರ್ಪಕ ವಿದ್ಯುತ್ ಇಲ್ಲ. ಪ್ರಾಚೀನ ಭಾರತದ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ

ರೇಲ್ವೆ ಅಭಿವೃದ್ಧಿಗೂ ಹಲವು ಅಭಿವೃದ್ಧಿ ಕ್ರಮ ಜಾರಿ.
ಹಳೇ ನೀತಿಗಳನ್ನು ಅನುಸರಿಸಿದರೆ ಇನ್ನೂ 10 ವರ್ಷ ಕಾಯಬೇಕಾಗುತ್ತೆ. ಇನ್ನೂ 10 ವರ್ಷ ಕಾಯಲು ದೇಶ ಸಿದ್ಧವಿಲ್ಲ. 1000 ದಿನಗಳೊಳಗಾಗಿ ಪ್ರತಿ ಗ್ರಾಮಗಳಲ್ಲೂ ವಿದ್ಯುತ್ ಸಂಪರ್ಕ
ಗ್ಯಾಸ್, ಯೂರಿಯಾ ಪೂರೈಕೆಗಾಗಿ ಹೊಸ ನೀತಿ ಜಾರಿ. ರೈತರಿಗೆ ಎಷ್ಟು ಯೂರಿಯಾ ಬೇಕೋ ಅಷ್ಟು ನೀಡಲು ಸಿದ್ಧ.

ನಾನು ಯಾವುದೇ ರಾಜ್ಯದ ಹೆಸರನ್ನು ಹೇಳಲು ಬಯಸುವುದಿಲ್ಲ. ರಾಜ್ಯದ ಹೆಸರು ಹೇಳಿದರೆ ಮತ್ತೆ ರಾಜಕೀಯ ಬಣ್ಣ ಬಳಿಯುತ್ತಾರೆ.

ಪ್ರತಿ ಬ್ಯಾಂಕ್ ಶಾಖೆ ಸ್ಟಾರ್ಟ್ ಅಪ್ ಸಾಲ ನೀಡಬೇಕು. ಬಡವ ದಲಿತ ಆದಿವಾಸಿಗಳಿಗೆ ಸಾಲ ನೀಡಬೇಕು.

ಸಣ್ಣ ಉದ್ದಿಮೆದಾರರಿಗೆ ನೆರವು ನೀಡಿದ್ರೆ ಉದ್ದಿಮೆ ಬೆಳೆಯುತ್ತೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುತ್ತದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಹೆಚ್ಚಿನ ಒತ್ತು. ದೇಶದ ಯುವಜನೆತೆಯನ್ನು ಪ್ರೋತ್ಸಾಹಿಸಬೇಕಾಗಿದೆ.
‘ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ’ ದೇಶದ ಬ್ಯಾಂಕ್ ಗಳಿಗೆ ಪ್ರಧಾನಿ ಮೋದಿ ಮನವಿ. ಪ್ರತಿ ಬ್ಯಾಂಕ್ ಶಾಖೆ ಸ್ಟಾರ್ಟ್ ಅಪ್ ಸಾಲ ನೀಡಬೇಕು.

Write A Comment