ಜೈಲು ಶಿಕ್ಷೆಯಿಂದ ಪಾರಾಗಲು ಅಪರಾಧಿಗಳು ಅನಾರೋಗ್ಯದ ನೆಪ ಒಡ್ಡುವುದು ಮಾಮೂಲಿ. ಆದರೆ ಇಲ್ಲೊಬ್ಬಳು ಮಾಹಿತಿ ಸೆರೆಮನೆ ವಾಸ ತಪ್ಪಿಸಿಕೊಳ್ಳಲು ಬರೋಬ್ಬರಿ 13 ಬಾರಿ ಗರ್ಭವತಿಯಾಗಿ ಅಚ್ಚರಿಗೆ ಕಾರಣವಾಗಿದ್ದಾಳೆ.
ಹೌದು. ಬೀಜಿಂಗ್ ನಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಮಹಿಳೆಯೊಬ್ಬಳಿಗೆ ಭ್ರಷ್ಟಾಚಾರದ ಆರೋಪದಲ್ಲಿ 2005 ರಲ್ಲಿ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಈ ಸಮಯದಲ್ಲಿ ಆಕೆ ಗರ್ಭವತಿಯಾದುದರಿಂದ ಶಿಕ್ಷೆಯನ್ನು ನ್ಯಾಯಾಲಯ ಮುಂದೂಡಿತ್ತು. ಇದನ್ನೇ ಬಂಡವಾಳವಾಗಿಸಿಕೊಂಡ ಆಕೆ 14 ಬಾರಿ ತಾನು ಗರ್ಭವತಿಯಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿ ಜೈಲು ಶಿಕ್ಷೆಯಿಂದ ಪಾರಾಗಿದ್ದಳು.
ಆದರೆ ಇದೀಗ ಆಕೆಯೇ ಸತ್ಯವನ್ನು ಒಪ್ಪಿಕೊಂಡಿದ್ದು ತಾನು 13 ಬಾರಿ ಗರ್ಭವತಿಯಾಗಿರುವ ಕುರಿತಾಗಿ ದಾಖಲೆಗಳನ್ನು ನೀಡಿದ್ದು ಈಕೆಯ ಈ ತಂತ್ರಕ್ಕೆ ಅಚ್ಚರಿಗೊಂಡಿರುವ ನ್ಯಾಯಾಲಯ ಇದೀಗ ಮತ್ತೆ ದೀರ್ಘಾವಧಿ ಶಿಕ್ಷೆ ವಿಧಿಸಿದೆ.