ರಾಷ್ಟ್ರೀಯ

ನಾಲ್ಕೂವರೆ ವರ್ಷದ ಬಾಲಕಿ ಎದುರು ಅಂಗಾಂಗ ಪ್ರದರ್ಶಿಸಿದ ಬಾಲಕ !

Pinterest LinkedIn Tumblr

9209hqdefaultನಾಲ್ಕೂವರೆ ವರ್ಷದ ಬಾಲಕಿಯ ಎದುರು ಅಪ್ರಾಪ್ತ ಬಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಇಲ್ಲಿನ ಭುಸ್ವಾಲ್ ನಲ್ಲಿ ಅಗಸ್ಟ್ ಐದರಂದು ಈ ಘಟನೆ ನಡೆದಿದ್ದು ಶಾಲೆಯಲ್ಲಿ 12 ವರ್ಷದ ಬಾಲಕ ಪುಟ್ಟ ಬಾಲಕಿಗೆ ತನ್ನ ಅಂಗಾಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದು ಇದರಿಂದ ಭಯಗೊಂಡ ಬಾಲಕಿ ಶಾಲಾ ಶಿಕ್ಷಕಿಯರಿಗೆ ವಿಷಯ ತಿಳಿಸಿದ್ದಾಳೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಪ್ರಾಪ್ತನಾಗಿರುವ ಕಾರಣಕ್ಕೆ ಆತನ ಪೋಷಕರು ಹಾಗೂ ಶಾಲಾ ಮುಖ್ಯಸ್ಥರನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment