ರಾಷ್ಟ್ರೀಯ

ಹೈದರಾಬಾದ್ ನಲ್ಲಿ ಆರು ಉಗ್ರರ ಆರೆಸ್ಟ್

Pinterest LinkedIn Tumblr

6ನಿಷೇಧಿತ ಹೂಜಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಅನುಮಾನದಲ್ಲಿ ಒಬ್ಬ ಪಾಕಿಸ್ತಾನದ ಪ್ರಜೆ ಸೇರಿದಂತೆ ಆರು ಮಂದಿ ಶಂಕಿತ ಉಗ್ರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ದಕ್ಷಿಣ ವಲಯ ಕ್ಷಿಪ್ರ ಪೊಲೀಸ್ ಪಡೆ, ಕೇಂದ್ರ ಅಪರಾಧ ಠಾಣೆ ಮತ್ತು ಹೈದರಾಬಾದ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಹೂಜಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾನೆ ಎನ್ನಲಾದ ಪಾಕಿಸ್ತಾನದ ಮೊಹಮ್ಮದ್ ನಜೀರ್ ಎಂಬಾತನನ್ನು ಬಂಧಿಸಿದ್ದು ಈ ಸಮಯದಲ್ಲಿ ಯಾವುದೇ ಅಧಿಕೃತ ದಾಖಲೆ ಇಲ್ಲದೇ ನಗರದಲ್ಲಿ ಉಳಿದುಕೊಂಡಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳು, ಒಬ್ಬ ಮ್ಯಾನ್ಮಾರ್ ನಿವಾಸಿ ಹಾಗೂ ಇಬ್ಬರು ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಬಂಧಿತರಿಂದ ಹಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಇವರೆಲ್ಲರೂ ನಿಷೇಧಿತ ಹೂಜಿ ಸಂಘಟನೆಯೊಂದಿಗೆ ಗುರುತಿಸಿಕೊಂಡು ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿದ್ದರು ಎನ್ನಲಾಗುತ್ತಿದೆ.

Write A Comment