ರಾಷ್ಟ್ರೀಯ

ಎರಡೂ ಕೈಗಳಿಲ್ಲದ ಈತ ಕಳ್ಳತನಕ್ಕಿಳಿದಿದ್ದ !!

Pinterest LinkedIn Tumblr

dddಕೈಯಿಲ್ಲದವರನ್ನು ಕಂಡು ನಾವು ಅಯ್ಯೋ ಪಾಪ ಎನ್ನುತ್ತೇವೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳನೊಬ್ಬ ಕೈಯಿಲ್ಲದಿದ್ದರೂ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು. ಹತ್ತು ವರ್ಷದ ಹಿಂದೆ ವಿದ್ಯುತ್ ಶಾಕ್‍ನಿಂದಾಗಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ ರೆಹಮತ್ ಎಂಬ 28 ವರ್ಷದ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಇಳಿದಿದ್ದ. ಅದರಲ್ಲಿಯೂ ಏಣಿ ಮೂಲಕ ಕೋರ್ಟ್ ನ ಕಿಟಕಿ ಪ್ರವೇಶ ಮಾಡಿ ಪಿಸ್ತೂಲ್‍ನ್ನು ಕಳ್ಳತನ ಮಾಡಿದ್ದ ಈತ ತದ ನಂತರ ಎರಡು ಕೈಗಳನ್ನು ಕಳೆದುಕೊಂಡಿದ್ದರೂ ಗುದಯಿರಿ ಪ್ರದೇಶದಲ್ಲಿದ್ದ ದೇವಾಲಯ ಮತ್ತು ಮನೆಗಳಿಗೆ ನುಗ್ಗಿ ಆಭರಣಗಳನ್ನು ದೋಚುತ್ತಿದ್ದ ಎನ್ನಲಾಗಿದೆ.

ಬರೋಬ್ಬರಿ 13 ಪ್ರಕರಣಗಳಲ್ಲಿ ಬೇಕಾಗಿದ್ದ ಈತನ  ಮೇಲೆ ಕೈಗಳಿಲ್ಲದ ಕಾರಣ ಯಾವುದೇ ಅನುಮಾನ  ಬರುತ್ತಿರಲಿಲ್ಲ. ಆದರೆ ತನ್ನ ಸ್ನೇಹಿತರ ಜೊತೆ ಕಳ್ಳತನ ಮಾಡುತ್ತಿರುವ ಸಮಯದಲ್ಲಿ   ಛತ್ತೀಸ್‍ಗಢ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.ಕದ್ದ ಆಭರಣಗಳನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾಗ ರೆಹಮತ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ರಾಯ್‍ಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Write A Comment