ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಕಡಿತಗೊಳ್ಳುವ ಮೂಲಕ 69 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಾಹನ ಸವಾರರಿಗೆ ಭರ್ಜರಿ ಗಿಫ್ಟ್ ದೊರೆತಿದೆ.
ಹೌದು . ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪ್ರತೀ ಲೀಟರ್ ಪೆಟ್ರೋಲ್ ಗೆ 1.27 ರೂಪಾಯಿ ಹಾಗೂ ಡೀಸೆಲ್ 1.17 ರೂಪಾಯಿಯನ್ನು ತೈಲ ಕಂಪನಿಗಳು ಇಳಿಸುವ ಮೂಲಕ ಗ್ರಾಹಕರ ಹೊರೆಯನ್ನು ಕೊಂಚ ಕಡಿಮೆ ಮಾಡಿವೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದ ಕುಸಿತ ಹಾಗೂ ಉತ್ಪಾದನೆ ಹೆಚ್ಚುತ್ತಿರುವುದರಿಂದ ತೈಲ ಕಂಪನಿಗಳು ಈ ನಿರ್ಧಾರ ತೆಗೆದುಕೊಂಡಿದ್ದು ಆ ಮೂಲಕ ಕಳೆದ ಹದಿನೈದು ದಿನಗಳಲ್ಲಿ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡಂತಾಗಿದೆ.