ಕಳೆದ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಬುಲೆಟ್ ಪ್ರೂಫ್ ರಹಿತರಾಗಿ ಭಾಷಣ ಮಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದ ಪ್ರಧಾನಿ ಮೋದಿ ಅವರಿಗೆ ಈ ಬಾರಿ ಬುಲೆಟ್ ಪ್ರೂಫ್ ಒದಗಿಸಲು ಭದ್ರತಾಧಿಕಾರಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಐತಿಹಾಸಿಕ 69ನೆ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬುಲೆಟ್ ಪ್ರೂಫ್ ನಿರ್ಧರಿಸಲಾಗಿದ್ದು ಹಾಗಾಗಿ ಬುಲೆಟ್ ಪ್ರೂಫ್ ರಕ್ಷಣೆಯಲ್ಲಿ ನರೇಂದ್ರ ಮೋದಿಯವರು ಶನಿವಾರ ಐತಿಹಾಸಿಕ ಕೆಂಪುಕೋಟೆ ಮೇಲೆ ರಾಷ್ಟ್ರದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಂಪ್ರದಾಯದಂತೆ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವಧಿಯಿಂದ ಈವರೆಗೂ ಆಡಳಿತ ನಡೆಸಿದ ಎಲ್ಲ ಪ್ರಧಾನಿಗಳಿಗೂ ಈ ಸಮಯದಲ್ಲಿ ಗುಂಡು ನಿರೋಧಕ ಒದಗಿಸಲಾಗುತ್ತಿತ್ತು. ಆದರೆ ಕಳೆದ ಬಾರಿ ಗೃಹ ಇಲಾಖೆ ನರೇಂದ್ರಮೋದಿಗೆ ಬುಲೆಟ್ ಪ್ರೂಫ್ ಒದಗಿಸುವಂತೆ ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಜನರನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಬುಲೆಟ್‌ಪ್ರೂಫ್ ತೆಗೆಸಿದ್ದರು.