ರಾಷ್ಟ್ರೀಯ

ಸಮಾನ ಶ್ರೇಣಿ, ಸಮಾನ ಪಿಂಚಣಿ ಪ್ರತಿಭಟನೆ ದೇಶದ ಭದ್ರತೆಗೆ ಅಪಾಯ: ನಿವೃತ್ತ ಸೇನಾ ಮುಖ್ಯಸ್ಥರ ಎಚ್ಚರಿಕೆ

Pinterest LinkedIn Tumblr

armyನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್( ಸಮಾನ ಶ್ರೇಣಿ, ಸಮಾನ ಪಿಂಚಣಿ) ಯೋಜನೆ ಜಾರಿ ವಿಳಂಬವಾಗುತ್ತಿರುವುದಕ್ಕೆ ಅಕ್ರೋಶಗೊಂಡಿರುವ ನಾಲ್ಕು ಮಂದಿ ನಿವೃತ್ತ ಸೇನಾ ಮುಖ್ಯಸ್ಥರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ನಿವೃತ್ತ ಯೋಧರ ಪ್ರತಿಭಟನೆ ಹೀಗೇ ಮುಂದುವರಿದರೆ ದೇಶದ ಭದ್ರತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರದ ವಿಳಂಬ ನೀತಿ ಯೋಧರ ಸ್ಥೈರ್ಯ, ಸ್ವಾಭಿಮಾನಗಳನ್ನು ಪರೀಕ್ಷಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಷ್ಟ್ರಪತಿಗಳಿಗೆ ಬರೆಯಲಾಗಿರುವ ಪತ್ರದಲ್ಲಿ ಎಚ್ಚರಿಸಲಾಗಿದೆ. ಒ.ಆರ್.ಒ.ಪಿ ವಿಳಂಬವಾಗುತ್ತಿರುವುದು ದೇಶದ ಭದ್ರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಶಸ್ತ್ರ ಪಡೆಯ ಸರ್ವೋಚ್ಚ ದಂಡನಾಯಕ ಹಾಗೂ ರಾಷ್ಟ್ರದ ಪ್ರಥಮ ಪ್ರಜೆಯಾಗಿರುವ ನಿಮ್ಮ ಗಮನಕ್ಕೆ ತರುವುದು ಅಗತ್ಯವಾಗಿದೆ ಎಂದು ಪ್ರಣಬ್ ಮುಖರ್ಜಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಒನ್ ರ್ಯಾಂಕ್ ಒನ್ ಪೆನ್ಷನ್ ಜಾರಿಗೆ ಮತ್ತಷ್ಟು ಕಾಯುವಷ್ಟು ತಾಳ್ಮೆ ನಮ್ಮಲ್ಲಿಲ್ಲ ಎಂದು ನೌಕಾ ಪಡೆಯ ಮಾಜಿ ಮುಖ್ಯಸ್ಥರುಗಳಾದ ಅಡ್ಮಿರಲ್ ಅರುಣ್ ಪ್ರಕಾಶ್, ಅಡ್ಮಿರಲ್ ಎಲ್ ರಾಮದಾಸ್ ಮತ್ತು ಅಡ್ಮಿರಲ್ ಸುರೇಶ್ ಮೆಹ್ತಾ ಹಾಗೂ  ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಸ್. ಎಫ್. ರೋಡ್ರಿಗಾಸ್ ರಾಷ್ಟ್ರಪತಿ ಬಳಿ ಅಳಲು ತೋಡಿಕೊಂಡಿದ್ದಾರೆ.

Write A Comment