ನವದೆಹಲಿ: ಉಧಾಂಪುರ ದಾಳಿಯ ವೇಳೆ ಜೀವಂತವಾಗಿ ಸೇರೆ ಸಿಕ್ಕ ಉಸ್ಮಾನ್ ಖಾನ್ ಅಲಿಯಾಸ್ ಮೊಹಮ್ಮದ್ ನಾವೇದ್ ನನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಹೆಚ್ಚಿನ ವಿಚಾರಣೆಗಾಗಿ ಗುರುವಾರ ದೆಹಲಿಗೆ ಕರೆತಂದಿದ್ದು, ಉಗ್ರ ಪಾಕಿಸ್ತಾನದೊಂದಿಗೆ ಹೊಂದಿರುವ ಸಂಬಂಧವನ್ನು ಸಾಭೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಹೇಳಿದೆ.
ವಿಚಾರಣೆ ವೇಳೆ ಉಗ್ರ ನಾವೇದ್ ಸಾಕಷ್ಟು ವಿಷಯಗಳನ್ನು ಬಾಯಿಬಿಟ್ಟಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಯೂ ನಂಟು ಹೊಂದಿರುವುದಾಗಿ ಹೇಳಿದ್ದಾನೆ ಎಂದು ಎನ್ಐಎ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದೊಂದು ಅಂತರಾಷ್ಟ್ರೀಯ ಮತ್ತು ಅತಿ ಸೂಕ್ಷ್ಮ ಪ್ರಕರಣವಾಗಿದ್ದು, ವಿಚಾರಣೆ ವೇಳೆ ಆರೋಪಿ ನೀಡಿದ ಎಲ್ಲಾ ಹೇಳಿಕೆಗಳಿಗೂ ನಾವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಮತ್ತು ಆತ ಪಾಕಿಸ್ತಾನ ಬೆಂಬಲಿತ ವ್ಯಕ್ತಿ ಎಂದು ಎನ್ಐಎ ನಿರ್ದೇಶಕರು ಹೇಳಿದ್ದಾರೆ.
ಕಳೆದ ಆಗಸ್ಟ್ 3ರಂದು ಜಮ್ಮು ಮತ್ತು ಕಾಶ್ಮೀರದ ಉಧಾಂಪುರದಲ್ಲಿ ನಡೆದ ಉಗ್ರರ ದಾಳಿಯ ವೇಳೆ ಭಾರತೀಯ ಸೇನಾಪಡೆ ನಾವೇದ್ ನನ್ನು ಬಂಧಿಸಿತ್ತು.