ನವದೆಹಲಿ: ಕಾಂಗ್ರೆಸ್ ವರ್ತನೆ ನೋಡಿದರೆ ಇಂದು ನನಗೆ ತುರ್ತು ಪರಿಸ್ಥಿತಿಯ ದಿನಗಳು ನೆನಪಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಸಂಸದರ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಅನಗತ್ಯವಾಗಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದರು.
ಕಾಂಗ್ರೆಸ್ ಅಧಿವೇಶನಕ್ಕೆ ಹೇಗೆ ಅಡ್ಡಿ ಪಡಿಸುತ್ತಿದೆ ಮತ್ತು ದೇಶದ ಅಭಿವೃದ್ಧಿ ಹೇಗೆ ಮಾರಕವಾಗುತ್ತಿದೆ ಎಂಬುದನ್ನು ದೇಶದ ಜನತೆಯ ಮುಂದೆ ವಿವರಿಸಿ, ಕಾಂಗ್ರೆಸ್‌ನ ಅಜೆಂಡಾವನ್ನು ಜನತೆಯ ಮುಂದೆ ಬಹಿರಂಗಪಡಿಸಿ ಎಂದು ಪ್ರಧಾನಿ ಸಂಸದರಿಗೆ ಕರೆ ನೀಡಿದರು.
ಕಾಂಗ್ರೆಸ್ ಈಗ ಹತಾಶಗೊಂಡಿದ್ದು, ಕಳೆದ ಲೋಕಸಭೆ ಚುನಾವಣೆಯ ಸೋಲು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ತನ್ನ ಕುಟುಂಬದ ರಕ್ಷಣೆಗೆ ನಿಂತಿದೆ. ಆದರೆ ನಾವು ದೇಶ ರಕ್ಷಣೆಗೆ ಮುಂದಾಗಿದ್ದೇವೆ ಎಂದು ಪ್ರಧಾನಿ ಹೇಳಿದರು.