ಉತ್ತರ ಕಾಶ್ಮೀರದ ಕುಪ್ವಾರಾ ವಲಯದಲ್ಲಿಮತ್ತೆ ಉಗ್ರರು ಭಾರತೀಯ ಗಡಿ ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.
ಶನಿವಾರ ಸಂಜೆಯ ಸಮಯದಲ್ಲಿ 20 ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಪಡೆಯ ಯೋಧರ ತುಕಡಿ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಸೇನಾ ಶಿಬಿರದ ಸುತ್ತಮುತ್ತ ಪ್ರತಿದಿನದಂತೆ ಗಸ್ತು ತಿರುಗುತ್ತಿರುವಾಗ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಸಾಗುತ್ತಿರುವುದನ್ನು ಗಮನಿಸಿ ಅವರನ್ನು ತಡೆಯಲು ಮುಂದಾದರು.ಈ ಸಮಯದಲ್ಲಿ ಉಗ್ರರು ಯೋಧರೆಡೆಗೆ ಗುಂಡಿನ ದಾಳಿ ನಡೆಸಿದ್ದು ಪ್ರತಿಯಾಗಿ ಭಾರತೀಯ ಯೋಧರೂ ಸಹ ಸಮರ್ಪಕ ಎದಿರೇಟು ನೀಡುತ್ತಿದ್ದಾರೆ ಎನ್ನಲಾಗಿದೆ.
ಇಲ್ಲಿಯವರೆಗೂ ಗುಂಡಿನ ಕಾಳಗ ಮುಂದುವರೆದಿದ್ದು ಯಾವುದೇ ಸಾವು ನೋವಿನ ಮಾಹಿತಿ ಲಭ್ಯವಾಗಿಲ್ಲ.