ರಾಷ್ಟ್ರೀಯ

ದೇವ ಮಹಿಳೆ ರಾಧೆ ಮಾ ಅವರ ‘ನಿಗೂಢ ಲೋಕ’ದಲ್ಲೇನಿದೆ?

Pinterest LinkedIn Tumblr

radhemaa_1ನವದೆಹಲಿ:  ತುಂಡುಡುಗೆ ತೊಟ್ಟು  ವಿವಾದಕ್ಕೀಡಾಗಿರುವ ದೇವ ಮಹಿಳೆ ರಾಧೆ ಮಾ ಅವರ ನಿಗೂಢ ಲೋಕದ ಬಗ್ಗೆ ಈಗ ಒಂದೊಂದೇ ವಿಷಯಗಳು  ಬಹಿರಂಗವಾಗುತ್ತಿವೆ.

ಚೋಟಿ ಮಾ ಮತ್ತು ತಲ್ಲೀ ಬಾಬಾ ಇವರಿಬ್ಬರೂ ರಾಧೆ ಮಾ ಅವರ ಪರಮಾಪ್ತರು. ರಾಧೆ ಮಾ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಇವರಿಬ್ಬರ ಬಗ್ಗೆಯೇ ಮಾಹಿತಿ ನೀಡಲಾಗಿದೆ.

ರಾಧೆ ಮಾ ಅವರನ್ನು ನೇರ ಭೇಟಿಯಾಗಬೇಕಿದ್ದರೆ, ತಲ್ಲಿ ಬಾಬಾ ಅವರನ್ನು ಮೊದಲು ಭೇಟಿಯಾಗಬೇಕು. ತಲ್ಲಿ ಬಾಬಾ ಓಕೆ ಅಂದ ಮೇಲೆ ಅವರು ಚೋಟಿ ಮಾ ಅವರಲ್ಲಿಗೆ ಕಳುಹಿಸಿಕೊಡುತ್ತಾರೆ. ಅಲ್ಲಿ ಚೋಟಿ ಮಾ ಭಕ್ತರ ಸಂದರ್ಶನ ಮಾಡಿ ಆಮೇಲೆ ಅವರನ್ನು ರಾಧೆ ಮಾ ಅವರ ದರ್ಶನಕ್ಕೆ ಅನುಮತಿ ನೀಡಲಾಗುವುದು.

ವೆಬ್‌ಸೈಟಿನಲ್ಲಿ ಚೋಟಿ ಮಾ, ತಲ್ಲಿ ಬಾಬಾ ಬಗ್ಗೆ ಕೊಟ್ಟಿರುವ ವಿವರಗಳು ಹೀಗಿವೆ

ಚೋಟಿ ಮಾ

ಚೋಟಿ ಮಾ ಅವರು ಗುರು ಮಾ ಅವರ ಪರಮಾಪ್ತೆ. ಚೋಟಿ ಮಾ ಅವರ ಮಾತುಗಳನ್ನು ಎಲ್ಲರು ಕೇಳಲೇ ಬೇಕು. ಅವರ ಆದೇಶಗಳೆಂದರೆ ಗುರು ಮಾ ಅವರು ಸ್ವತಃ ಹೇಳಿದಂತೆಯೆ. ಚೋಟಿ ಮಾ ಚಿಕ್ಕವಳಿರುವಾಗಲೇ ಇಲ್ಲಿದ್ದು ಗುರು ಮಾ ಅವರ ಸೇವೆ ಮಾಡುತ್ತಿದ್ದಾರೆ. ಭಕ್ತರು ತಮ್ಮ ಸಮಸ್ಯೆಗೆ ಪರಿಹಾರ ಬಯಸುತ್ತಿದ್ದರೆ ಅಂಥವರು ಚೋಟಿ ಮಾ ಅವರ ವಚನ ಪ್ರವಚನ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗಬೇಕು.  ಚೋಟಿ ಮಾ ಅವರು ಗುರು ಮಾ ಅವರ ಸಂದೇಶಗಳ ವಾಹಕವಾಗಿದ್ದಾರೆ. ಚೋಟಿ ಮಾ ವಚನ ಪ್ರವಚನ ಮಾಡುವಾಗ ಭಕ್ತರ ಹೊರತಾಗಿ ಯಾರೊಬ್ಬರನ್ನು ಒಳಗೆ ಬಿಡುವುದಿಲ್ಲ.

ತಲ್ಲೀ ಬಾಬಾ

ಮಮತಾಮಯೀ ಶ್ರೀ ರಾಧೆ ಮಾ ಅವರ ಸೇವಕ ಈ ತಲ್ಲಿ ಬಾಬಾ. ತಲ್ಲಿ ಅಂದರೆ ಪಂಜಾಬಿ ಭಾಷೆಯಲ್ಲಿ ಗಂಟೆ.  ಗುರು ಮಾ ನೀಡಿರುವುದರಿಂದಲೇ ಈ ಹೆಸರು ವಿಶೇಷವಾಗಿದೆ. ಗುರು ಮಾ ಅವರ ಜಾಗರಣ್,ವಚನ ಎಲ್ಲದರ ಬಗ್ಗೆಯೂ ಭಕ್ತರಿಗೆ ಮಾಹಿತಿ ಕೊಡುವವರು ತಲ್ಲೀ ಬಾಬಾ. ದೇವಾಲಯದ ಒಳಗೆ ಹೋಗುವಾಗ ಗಂಟೆ ಬಾರಿಸಿ ಒಳಗೆ ಹೋಗುವಂತೆ ಗುರು ಮಾ ಅವರನ್ನು ಭೇಟಿಯಾಗಬೇಕಾದರೆ ಅವರು ತಲ್ಲಿ ಬಾಬಾ ನನ್ನು ಮೊದಲು ಭೇಟಿಯಾಗಬೇಕು. ಗುರು ಮಾ ಅವರ ಬಗ್ಗೆ ಎಲ್ಲ ಮಾಹಿತಿಗಳನ್ನು ತಲ್ಲಿ ಬಾಬಾ ನೀಡುತ್ತಾರೆ

Write A Comment