ಜೈಪುರ: ಇಷ್ಟಾರ್ಥ ಸಿದ್ದಿಗಾಗಿ ನರ ಬಲಿ ಕೊಡುವುದು ಕೆಲ ಮಾಂತ್ರಿಕರು ಕಂಡುಕೊಂಡ ದಾರಿ. ಮನುಷ್ಯರನ್ನು ಬಲಿ ಕೊಟ್ಟು ಅದೇನು ಸಾಧಿಸುತ್ತಾರೊ ದೇವರೇ ಬಲ್ಲ.
ಇಲ್ಲೊಬ್ಬ ಮಾಂತ್ರಿಕ ತಾನು ಅಂದುಕೊಂಡ ಕಾರ್ಯ ಸಾಧನೆಗಾಗಿ ಬಾಲಕನೊಬ್ಬನನ್ನು ಬಲಿಕೊಟ್ಟಿದ್ದ. ನಂತರ ಆ ಮಾಂತ್ರಿಕನಿಗೆ ಏನಾಯ್ತು? ಮುಂದೆ ಓದಿ.
ಆ ಮಾಂತ್ರಿಕನ ಹೆಸರು ಪೀತಾಂಬರ ಗೈಪೆ. ಈಗ ಆತನ ಸ್ಥಿತಿ ಏನೋ ಮಾಡಲು ಹೋಗಿ ಸಿಕ್ಕಿಕೊಂಡಂತಾಗಿದೆ. ಆತ 2010 ರ ಫೆ. 11 ರಂದು ಇಚ್ಛಾನಗರ್ ಎಂಬ ಗ್ರಾಮದಲ್ಲಿ ಶ್ರೀಕಾಂತ್ ಬಾಗ್ ಎನ್ನುವ 8 ವರ್ಷದ ಬಾಲಕನನ್ನು ಬಲಿ ಕೊಟ್ಟಿದ್ದ.
ನಂತರದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಾಂತ್ರಿಕನಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಾಡಿದ ತಪ್ಪಿಗೆ ಈತ ಈಗ ತಕ್ಕ ಶಿಕ್ಷೆ ಅನುಭವಿಸುವಂತಾಗಿದೆ.