ರಾಷ್ಟ್ರೀಯ

ಪ್ರೀತಿಸಿ ಓಡಿ ಹೋದವಳ ತಲೆ ಬೋಳಿಸಿದರು !

Pinterest LinkedIn Tumblr

fileಸ್ವಜಾತಿಯ ಯುವಕನನ್ನು ಪ್ರೀತಿಸಿ ಓಡಿ ಹೋಗಿದ್ದ ಯುವತಿಯ ತಲೆ ಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.

ವಾರಣಾಸಿಯ ಕೋಯಿರಾಜ್ ಪುರದಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಯುವತಿಯೊಬ್ಬಳು ಸ್ವಜಾತಿಯ ಯುವಕನನ್ನು ಪ್ರೀತಿಸಿ ಆತನೊಂದಿಗೆ ಓಡಿ ಹೋಗಿದ್ದಳು. ಆದರೆ ಯುವಕನ ಕಡೆಯವರು ಇಬ್ಬರನ್ನೂ ಹುಡುಕಿ ಗ್ರಾಮಕ್ಕೆ ಕರೆ ತಂದಿದ್ದಾರೆ. ಆಕೆ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಗ್ರಾಮಸ್ತರು ಆಕೆಯ ತಲೆಯನ್ನೂ ಬೋಳಿಸಿ ಊರ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ಲ , ಸ್ಥಳೀಯ ಪಂಚಾಯತ್ ನಲ್ಲಿ ನ್ಯಾಯಕ್ಕಾಗಿ ಮೊರೆ ಹೋದ ಸಮಯದಲ್ಲಿ ಆಕೆಯನ್ನು ಹಾಗೂ ಆಕೆಯ ಮನೆಯವರನ್ನೂ ಸಹ ಮನಬಂದಂತೆ ಥಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಘಾತಕಾರಿ ವಿಷಯವೆಂದರೆ ತಮಗಾದ ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಯುವತಿ ಹಾಗೂ ಮನೆಯವರು ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಈ ಸಮಯದಲ್ಲಿ ಪ್ರಧಾನಿ ಮೋದಿ ಅವರಿಗೆ ದೂರು ನೀಡಿ ಎಂದು ಪೊಲೀಸರು ಉಡಾಫೆ ಉತ್ತರ ನೀಡಿ ಅವರನ್ನು ಹೊರಕಳಿಸಿದ್ದಾರೆ ಎನ್ನಲಾಗಿದೆ.

ನಂತರ ನೊಂದ ಯುವತಿ ಬಾದಾಗಾನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment