ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇಂಟರ್ನೆಟ್ ಒದಗಿಸುವ ಸಂಸ್ಥೆಗಳು, ಅಶ್ಲೀಲ ವೆಬ್ ಸೈಟ್ ಗಳನ್ನು ನಿಷೇಧಿಸಿದ್ದು, ಆದರೆ ವಾಮಮಾರ್ಗದ ಮೂಲಕ ಇದನ್ನು ವೀಕ್ಷಿಸಲು ಮುಂದಾಗುವವರಿಗೆ ಕಡಿವಾಣ ಹಾಕಲು ಕಷ್ಟಸಾಧ್ಯ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಉಚಿತ ಫ್ರಾಕ್ಸಿ ಹಾಗೂ ವಿಪಿಎನ್ ಸರ್ವೀಸ್ ಮೂಲಕ ಇದು ಸಾಧ್ಯವಾಗುತ್ತದೆ ಎನ್ನಲಾಗಿದ್ದು, ಸರ್ಕಾರ ಏನೇ ನಿಷೇಧ ಮಾಡಿದರೂ ಅದಕ್ಕೆ ಮತ್ತೊಂದು ಮಾರ್ಗ ಹುಡುಕುವ ಮಂದಿ ಇದಕ್ಕಾಗಿ ವಾಮಮಾರ್ಗ ಅನುಸರಿಸಲು ಮುಂದಾಗುತ್ತಾರೆಂದು ಸೈಬರ್ ತಜ್ಞರು ಹೇಳುತ್ತಾರೆ.
ಜುಲೈ 31 ರಂದು ಸರ್ಕಾರ ಸೆಕ್ಷನ್ 79(3)(ಬಿ) ಐಟಿ ಕಾಯ್ದೆ 2000 ರನ್ವಯ 857 ಅಶ್ಲೀಲ ವೆಬ್ ಸೈಟ್ ಗಳ ಮೇಲೆ ನಿಷೇಧ ಹೇರಿದ್ದು, ಈ ಕುರಿತು ಪರ- ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿರುವ ಮಧ್ಯೆ ಇನ್ನೂ ಹಲವು ಅಶ್ಲೀಲ ವೆಬ್ ಸೈಟ್ ಗಳೂ ಕೂಡಾ ನಿಷೇಧದ ಪಟ್ಟಿ ಸೇರಲಿವೆ ಎಂದು ಹೇಳಲಾಗಿದೆ.