ಹೈದರಾಬಾದ್: ಭೂಕೈಲಾಸ ತಿರುಪತಿ ಲಡ್ಡು ಪ್ರಸಾದ ವಿತರಣೆ ಕಾರ್ಯ ಆರಂಭವಾಗಿ ಬರೋಬ್ಬರಿ 300 ವರ್ಷಗಳಾಗಿವೆ ಎಂದರೆ ನೀವು ನಂಬಲೇಬೇಕು.
1715 ರ ಅಗಸ್ಟ್ 2 ರಂದು ಮೊದಲ ಬಾರಿಗೆ ಕಲ್ಯಾಣ ಐಯ್ಯಂಗಾರ ಅವರು ತಿರುಪತಿಯಲ್ಲಿ ಲಡ್ಡು ಪ್ರಸಾದ ವಿತರಣೆ ಆರಂಭಿಸಿದರು. ತಿರುಪತಿಯಲ್ಲಿ ಪ್ರತಿದಿನ 3 ಲಕ್ಷ ಲಡ್ಡುಗಳನ್ನು ಮಾರಾಟ ಮಾಡಲಾಗುತ್ತದೆ, 3 ಪಾಳಿಯಲ್ಲಿ 200 ಅರ್ಚಕರು ಲಡ್ಡು ಪ್ರಸಾದ ತಯಾರಿಸುತ್ತಾರೆ.
ಪ್ರಸಾದ ವಿತರಣೆಗೆ 100 ಕ್ಕೂ ಹೆಚ್ಚು ಕೌಂಟರ್ ಗಳನ್ನು ತೆರೆಯಲಾಗಿದೆ. ತಿರುಪತಿ ಪ್ರಸಾದದ ವಿಶೇಷವೆಂದರೆ ಇಂತಹ ರುಚಿಕರ ಮತ್ತು ಸ್ವಾದಿಷ್ಟ ಪ್ರಸಾದ ಬೇರೆ ಕಡೆ ಸಿಗುವುದಿಲ್ಲ. ಅತಿ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ವಿತರಣೆಯಿಂದಲೇ ಕೋಟ್ಯಾಂತರ ರೂ. ಅದಾಯ ಬರುತ್ತದೆ.