ಹೊಸದಿಲ್ಲಿ: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಮತ್ತೊಂದು ಹೆಜ್ಜೆ ಇಟ್ಟಿದ್ದು, 90 ಮಧ್ಯಮ ಬಹುಪಯೋಗಿ ಯುದ್ಧ ವಿಮಾನ (ಎಂಎಂಆರ್‌ಸಿಎ)ಗಳನ್ನು ಸ್ವತಃ ತಯಾರಿಸಲು ಭಾರತ ಮುಂದಾಗಿದೆ.
ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ಆರಂಭಿಸುವ ಅತ್ಯಂತ ದೊಡ್ಡ ಯೋಜನೆ ಇದಾಗಿದ್ದು, ಸುಮಾರು 30 ಮಿಲಿಯನ್ ಅಮೆರಿಕನ್ ಡಾಲರ್ ವ್ಯಯಿಸಲಿದೆ, ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯು ಸೇನೆಯಲ್ಲಿ ಯುದ್ಧಕ್ಕೆ ಅಗತ್ಯವಾದ ವಿಮಾನಗಳ ಕೊರತೆ ಇದ್ದು, ಹೊಸ ರಕ್ಷಣಾ ಸಂಪಾದನಾ ನಿಯಮ ಜಾರಿಗೊಂಡ ನಂತರ ಯೋಜನೆಯ ಪ್ರಸ್ತಾವನೆಯನ್ನು ಕಳುಹಿಸಲಾಗುತ್ತದೆ, ಎನ್ನಲಾಗಿದೆ.
ದೇಶಕ್ಕೆ ಸುಮಾರು 126 ಎಂಎಂಆರ್‌ಸಿಎಗಳ ಅಗತ್ಯವಿದೆ. ಈಗಾಗಲೇ ರಷ್ಯಾದೊಂದಿಗೆ 36 ರಫಾಲೆ ಯುದ್ಧ ವಿಮಾನಗಳನ್ನು ಪಡೆಯುವ ಒಪ್ಪಂದ ಮಾಡಿಕೊಂಡಿದೆ. ಆದರೆ, ಅಗತ್ಯವಿರುವ ಉಳಿದ ವಿಮಾನಗಳನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಅದಕ್ಕಾಗಿಯೇ ದೇಶದಲ್ಲಿಯೇ ವಿಮಾನ ತಯಾರಿಸಲು ಒತ್ತು ನೀಡಲಾಗುತ್ತಿದೆ.