ಲಿಬಿಯಾದಲ್ಲಿರುವ ಇಸಿಸ್ ಉಗ್ರರ ಜೊತೆ ಭಾರತ ವ್ಯವಹಾರ ನಡೆಸುತ್ತಿದೆಯಾ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ಲಿಬಿಯಾದ ಸಿರ್ಟೆಯಲ್ಲಿ ಅಪಹರಣಗೊಂಡಿದ್ದ ಇಬ್ಬರು ಭಾರತೀಯರನ್ನು ಬಿಡುಗಡೆಗೊಳಿಸಿರುವುದು ಸಂತಸದ ವಿಚಾರವಾಗಿದ್ದು ಉಳಿದಿಬ್ಬರ ಸುರಕ್ಷಿತ ಬಿಡುಗಡೆಗಾಗಿ ಪ್ರಾರ್ಥಿಸೋಣ. ಆದರೆ ಈ ವಿಷಯದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಸಿಸ್ ಉಗ್ರರ ಬಿಡುಗಡೆ ಮಾಡಿರುವ ಲಾಭ ಪಡೆಯಲು ಯತ್ನಿಸುತ್ತಿದ್ದು ಇದನ್ನುಗಮನಿಸಿದರೆ ಭಾರತ ಲಿಬಿಯಾದಲ್ಲಿರುವ ಇಸಿಸ್ ಉಗ್ರರ ಜೊತೆ ವ್ಯವಹಾರ ನಡೆಸುತ್ತಿದೆಯೇ ಎಂಬ ಅನುಮಾನ ಕಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ನಮ್ಮ ವಿದೇಶಾಂಗ ಸಚಿವರು ಲಿಬಿಯಾದ ಐಸಿಸ್ ಜತೆ ನೇರ ಸಂಪರ್ಕದ ಹಾಟ್‌ಲೈನ್‌ನಲ್ಲಿರುವುದರಿಂದ ಕೇಳುತ್ತಿದ್ದೇನೆ, ಲಿಬಿಯಾದಲ್ಲಿ ನಾಪತ್ತೆಯಾದ ಪಂಜಾಬ್ ಮೂಲದ 57 ಜನರ ಕತೆ ಏನಾಯಿತು? ಅವರು ಜೀವಂತವಿದ್ದಾರಾಅಥವಾ ಸಾವನ್ನಪ್ಪಿದ್ದಾರಾ ವಿದೇಶಾಂಗ ಸಚಿವರೇ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿವಾರಿ ಪ್ರಶ್ನಿಸಿದ್ದು ಈ ನಡುವೆ ತಿವಾರಿ ಅವರ ಈ ಹೇಳಿಕೆಗೆ ಬಿಜೆಪಿ ಕಿಡಿಕಾರಿದ್ದು ಇದೊಂದು ನಾಲಿಗೆ ಚಪಲ ತೀರಿಸಿಕೊಳ್ಳಲು ಆಡುತ್ತಿರುವ ಮಾತು ಎಂದು ಆಕ್ರೋಶ ವ್ಯಕ್ತಪಡಿಸಿದೆ.