ಮಣಿನಗರ್(ಗುಜರಾತ್), ಆ.1- ಹದಿನೇಳು ವರ್ಷದ ಯುವತಿಯನ್ನು ಐದು ಮಂದಿ ಕಾಮುಕರ ತಂಡ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಗುಜರಾತ್‌ನ ಮಣಿ ನಗರದಲ್ಲಿ ನಡೆದಿದೆ.
ಅಹಮದಾಬಾದ್ ಸಮೀಪವಿರುವ ಮಣಿನಗರದ ಹೊಟೇಲ್‌ವೊಂದರಲ್ಲಿ ಐದು ಮಂದಿ ದುಷ್ಕರ್ಮಿಗಳ ತಂಡ ಈ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮಿಂಚಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು ಎಲ್ಲಾ ಐದೂ ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಯುವತಿ ನೀಡಿರುವ ದೂರಿನಂತೆ, ನನ್ನ ಸ್ನೇಹಿತ ಹೊಟೇಲ್‌ಗೆ ತಿಂಡಿ ತಿನ್ನಲು ಕರೆದುಕೊಂಡು ಹೋದ. ಕೊಠಡಿಯೊಂದಕ್ಕೆ ಕರೆದೊಯ್ದು ಬಾಗಿಲು ಚಿಲಕ ಹಾಕಿ ಕೂಡಿಹಾಕಿದರು. ಇಲ್ಲಿದ್ದ ನಾಲ್ವರು ಸೇರಿಕೊಂಡು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾಳೆ. ಪೊಲೀಸರು ಕಾಮುಕರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.