ರಾಷ್ಟ್ರೀಯ

ಅಮ್ಮಾವ್ರ ಹೊಡೆತಕ್ಕೆ ತತ್ತರಿಸಿದ್ದಾರಂತೆ ಗಂಡಂದಿರು !

Pinterest LinkedIn Tumblr

husಗಂಡಂದಿರ ಕಿರುಕುಳ ಸಹಿಸಲಾರದೇ ಮಹಿಳೆಯರು ಮಹಿಳಾ ಸಹಾಯ ವಾಣಿಗೆ ಮೊರೆ ಹೋಗುವುದು ಮಾಮೂಲು. ಆದರೆ ಅಮ್ಮಾವ್ರ ಕಾಟ ತಾಳಲಾರದೇ ತಮಗೆ ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಹೌದು. ಗುಜರಾತಿನಲ್ಲಿ ಮಹಿಳೆಯರಿಗಾಗಿ ಅಭಯಮ್ ಸಹಾಯ ವಾಣಿಯನ್ನು ದೌರ್ಜನ್ಯವನ್ನೆದುರಿಸುತ್ತಿರುವ, ಸಮಸ್ಯೆಗೆ ಸಿಲುಕಿರುವ ಸ್ತ್ರೀಯರಿಗೆ ರಕ್ಷಣೆ ಒದಗಿಸಲು ತೆರೆಯಲಾಗಿದ್ದು ಇದಕ್ಕೆ ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿ ಕರೆ ಮಾಡಿ ತಮಗಾಗುವ ಕಿರುಕುಳವನ್ನು ವಿವರಿಸಿ ಪರಿಹಾರ ಒದಗಿಸಿಕೊಡಿ ಎಂದು ಮೊರೆ ಇಡುತ್ತಿದ್ದಾರಂತೆ.

ಅದರಲ್ಲಿಯೂ ಪತ್ನಿಯಿಂದ ನೊಂದ ಗಂಡಂದಿರ ನೋವೇನೆಂದರೆ ಪತ್ನಿಯರು ಕೇಳುವ ದುಬಾರಿ ಬೆಲೆಯ ವಸ್ತುಗಳು. ಇದನ್ನು ತಂದು ಕೊಡದಿದ್ದಾಗ ಮಹಿಳೆಯರು ಗಂಡಂದಿರಿಗೆ ಹೊಡೆಯಲೂ ಬಂದ ಪ್ರಕರಣಗಳ ಜೊತೆಗೆ ಮಾನಸಿಕ ಕಿರುಕುಳ ನೀಡುತ್ತಿರುವ ಪ್ರಸಂಗಗಳೂ ಹೆಚ್ಚಿದೆ.

ಏನೇ ಇರಲಿ, ಇಂದಿನ ವಾತಾವರಣ ನೋಡಿದರೆ ಮಹಿಳಾ ಸಹಾಯ ವಾಣಿಯ ಜೊತೆಗೆ ಪುರುಷರ ಸಹಾಯ ವಾಣಿಯ ಅಗತ್ಯತೆಯೂ ಇದೆ ಎಂಬುದಂತೂ ವಾಸ್ತವಿಕ ಸತ್ಯ. ಏನಂತೀರಿ..?

Write A Comment