ರಾಷ್ಟ್ರೀಯ

ಪ್ರತಿಪಕ್ಷಗಳಿಂದ ಮುಂದುವರಿದ ಪ್ರತಿಭಟನೆ: ಆ.3 ರಂದು ಕೇಂದ್ರ ಸರ್ಕಾರದಿಂದ ಸರ್ವಪಕ್ಷ ಸಭೆ

Pinterest LinkedIn Tumblr

parನವದೆಹಲಿ: ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಿಂದ ಸಂಸತ್ ಕಲಾಪ ವ್ಯರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೋಮವಾರ(ಆ.3 ) ರಂದು ಸರ್ವಪಕ್ಷ ಸಭೆ ಕರೆದಿದೆ.

ವಿರೋಧ ಪಕ್ಷಗಳ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಂಸತ್ ನ ಉಭಯ ಸದನಗಳಲ್ಲೂ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ತೀವ್ರಗೊಂಡಿದ್ದು ಮುಂಗಾರು ಅಧಿವೇಶನ ವ್ಯರ್ಥವಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಕರೆದು ಸುಗಮ ಕಲಾಪಕ್ಕೆ ಬೆಂಬಲಿಸುವಂತೆ ವಿರೋಧಪಕ್ಷಗಳಿಗೆ ಮತ್ತೊಮ್ಮೆ ಮನವಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಲಲಿತ್ ಮೋದಿ ಪ್ರಕರಣದಲ್ಲಿ ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆಗೆ ಆಗ್ರಹಿಸಿ  ಸಂಸತ್ ಅಧಿವೇಶನ ಪ್ರಾರಂಭವಾದ ಮೊದಲ ದಿನದಿಂದಲೂ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರಮುಖ ವಿಷಯಗಳು ಹಾಗೂ ಮಸೂದೆಗಳ ಬಗ್ಗೆ ಚರ್ಚೆ ನಡೆಯದೇ ಕಲಾಪ ವ್ಯರ್ಥವಾಗುತ್ತಿದೆ.  ಜುಲೈ ತಿಂಗಳ ಕೊನೆ ದಿನದ ಕಲಾಪವೂ ಪ್ರತಿಪಕ್ಷಗಳ ಗದ್ದಲದಿಂದ ಮುಂದೂಡಲಾಗಿದೆ.

Write A Comment