ಜೈಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ವಾಗ್ಧಾಳಿ ನಡೆಸಿರುವ ಕಾಂಗ್ರೆಸ್ ನೇತಾರ ಗುರುದಾಸ್ ಕಾಮತ್, ಮೋದಿ ಹಿತಾಸಕ್ತಿಯಿಂದ ಸ್ಮೃತಿ ಇರಾನಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿರುವ ಹಳ್ಳಿಗಳಲ್ಲಿ ಮುನಿಸಿಪಲ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಗುರುದಾಸ್ ಕಾಮತ್, ಬಿಜೆಪಿ ನಾಯಕಿ ಸ್ಮೃತಿ ಇರಾನಿಗೆ ಸಚಿವೆಯಾಗುವ ಅರ್ಹತೆಗಳು ಏನಿವೆ ಎಂದು ಪ್ರಶ್ನಿಸಿದ್ದು, ಮೋದಿ ಅವರಿಗೆ ರೈತರ ಬಗ್ಗೆ ಗಮನ ಹರಿಸುವುದಕ್ಕಿಂತ ಟಿವಿ, ಸೀರಿಯಲ್ ನೋಡುವುದರಲ್ಲಿ ಆಸಕ್ತಿ ಹೆಚ್ಚಿದೆ ಎಂದು ಟೀಕಿಸಿದ್ದಾರೆ.
ಮೋದಿ ಹಿತಾಸಕ್ತಿಯಿಂದಾಗಿ ಸ್ಮೃತಿ ಇರಾನಿಗೆ ಸಚಿವೆ ಸ್ಥಾನ ನೀಡಲಾಗಿದೆ. ಇರಾನಿ ಕುಟಂಬದವರು ಆರ್ಥಿಕವಾಗಿ ಹಿಂದುಳಿದವರು. ವರ್ಸೋವಾದಲ್ಲಿ ಫಾಸ್ಠ್ ಫುಡ್ ಹೋಟೆಲ್ ನಲ್ಲಿ ಕೆಲಸ ಮಾಡಿ, ಟೇಬಲ್ ಒರೆಸೋ ಕೆಲಸ ಮಾಡುತ್ತಿದ್ದವರು. ಕೇವಲ 10ನೇ ತರಗತಿ ಓದಿರುವ ಇರಾನಿ, ಮುಂಬೈನ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡಿದಂತವರು. ನಂತರ ಆಕೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ್ದು.
ಇಂತಹ ಅವಿದ್ಯಾವಂತೆಗೆ ಕೇಂದ್ರದ ಸಚಿವ ಸ್ಥಾನ ನೀಡುವುದೆಂದರೆ, ಇದು ವೈಯಕ್ತಿಕ ಹಿತಾಸಕ್ತಿಯಿಂದಾಗಿ ಮಾತ್ರ ಸಾಧ್ಯ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ಮೃತಿ ಇರಾನಿಯವರನ್ನು ಮೋದಿ ಅವರ ಸಚಿವೆಯನ್ನಾಗಿ ಮಾಡಿದರು ಎಂದು ಆರೋಪಿಸಿದ್ದಾರೆ.