ರಾಷ್ಟ್ರೀಯ

ಆ್ಯಕ್ಸಿಡೆಂಟ್ ಗಾಯಕ್ಕೆ ಕ್ಯಾಶ್‍ಲೆಸ್ ಚಿಕಿತ್ಸೆ

Pinterest LinkedIn Tumblr

modiನವದೆಹಲಿ: ರಸ್ತೆ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದವರಿಗೆ ತಕ್ಷಣವೇ ಹಣಪಾವತಿ ಮಾಡದೆ ಚಿಕಿತ್ಸಾ ವ್ಯವಸ್ಥೆ (ಕ್ಯಾಶ್ ಲೆಸ್ ಟ್ರೀಟ್ ಮೆಂಟ್) ಜಾರಿಗೆ ತರುವುದಾಗಿ ಪ್ರಧಾನಿ  ಮೋದಿ ತಿಳಿಸಿದ್ದಾರೆ. ಪ್ರತಿ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಈ ಮಾಹಿತಿ ನೀಡಿದ್ದಾರೆ.

ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವವರ ಬಗೆಗಿನ ಅಂಕಿ-ಅಂಶಗಳನ್ನು ಗಮನಿಸಿ ತಮಗೆ ಆಘಾತವಾಗಿದೆ. ಹೀಗಾಗಿ, ಶೀಘ್ರವೇ ರಸ್ತೆ ಸಾರಿಗೆ ಮತ್ತು ಸುರಕ್ಷತಾ ವಿಧೇಯಕವನ್ನು ಸಂಸತ್ ನಲ್ಲಿ ಮಂಡಿಸಿ, ಅನುಮೋದನೆ ಪಡೆಯುವುದಾಗಿ ತಿಳಿಸಿದ್ದಾರೆ.

ದೇಶಾದ್ಯಂತ ನಡೆಯುವ ಅಪಘಾತಗಳ ಬಗ್ಗೆ ಮಾಹಿತಿ ಹಾಗೂ ಜಾಗೃತಿಗಾಗಿ 1033 ಎಂಬ ದೂರವಾಣಿ ಸಂಖ್ಯೆಯನ್ನು ಆರಂಭಿಸುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಹಲವು ಮಂದಿ ಅಪಘಾತದ ಬಗ್ಗೆ ಮಾತನಾಡಬೇಕು ಎಂಬ ಬಗ್ಗೆ ತಮ್ಮಲ್ಲಿ ಮನವಿ ಮಾಡಿದ್ದರು. ಹೀಗಾಗಿ ಈ ಬಗ್ಗೆ ಮಾತನಾಡುತ್ತಿರುವುದಾಗಿ ಪ್ರಧಾನಿ ಹೇಳಿಕೊಂಡರು. ಅಪಘಾತದಲ್ಲಿ ಅಸುನೀಗುತ್ತಿರುವುದು 15-25 ವರ್ಷ ವಯೋಮಿತಿಯವರು ಎಂದು ಪ್ರಧಾನಿ ಹೇಳಿದ್ದಾರೆ.

ಸಲಹೆ ನೀಡಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಯಾವ ವಿಚಾರದ ಬಗ್ಗೆ ಮಾತನಾಡಬೇಕು ಎಂಬ ಬಗ್ಗೆ ಸಲಹೆ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

Write A Comment