ರಾಷ್ಟ್ರೀಯ

23 ಸಾವಿರಕ್ಕೆ ಇಳಿಯುತ್ತಂತೆ ಚಿನ್ನದ ದರ !

Pinterest LinkedIn Tumblr

goldಡಾಲರ್ ಮೌಲ್ಯ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿ ದರದ ನಿರ್ಧಾರದಿಂದ ಮುಂದಿನ ತಿಂಗಳೊಳಗಾಗಿ 10 ಗ್ರಾಂ ಚಿನ್ನದ ದರ 23 ಸಾವಿರ ರೂ. ಗಳಿಗೆ ಇಳಿಕೆಯಾಗಬಹುದೆಂದು ಹೇಳಲಾಗಿದೆ.

ಚಿನ್ನದ ದರ ಕಳೆದ ಕೆಲ ದಿನಗಳಿಂದ ಸತತ ಇಳಿಕೆ ಕಾಣುತ್ತಿದ್ದರೂ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ ಕಾರಣ ಶನಿವಾರದಂದು ಕೊಂಚ ಮಟ್ಟಿಗೆ ಏರಿಕೆ ಕಂಡಿತ್ತು. ಆದರೆ ಮುಂದಿನ ಒಂದು ತಿಂಗಳೊಳಗಾಗಿ ಚಿನ್ನದ ದರ 23 ಸಾವಿರ ರೂ. ಗಳ ಅಸುಪಾಸಿನಲ್ಲಿರುತ್ತದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈಗ ಆಷಾಢವಾಗಿರುವ ಕಾರಣ ಭಾರತೀಯ ಗ್ರಾಹಕರು ಚಿನ್ನ ಖರೀದಿಗೆ ಅಷ್ಟೇನೂ ಉತ್ಸುಕರಾಗದಿದ್ದು, ಶ್ರಾವಣ ಮಾಸದಲ್ಲಿ ವಿವಾಹ ಸೇರಿದಂತೆ ಶುಭ ಸಮಾರಂಭಗಳು ನಡೆಯುವ ಹಿನ್ನೆಲೆಯಲ್ಲಿ ಬಂಗಾರದ ಬೆಲೆ ಇಳಿಕೆಯಾಗಬಹುದೆಂಬ ಸುದ್ದಿಯಿಂದಾಗಿ ಸಂತಸಗೊಂಡಿದ್ದಾರೆ. ದರ ಇಳಿಕೆಯಾಗಲು ಅಂತರಾಷ್ಟ್ರೀಯ ಮಟ್ಟದ ವಿದ್ಯಾಮಾನಗಳೇ ಕಾರಣವೆನ್ನಲಾಗಿದ್ದು, ಇದರ ಲಾಭ ಗ್ರಾಹಕರಿಗಾಗಲಿದೆ.

Write A Comment