ರಾಷ್ಟ್ರೀಯ

ಆತ್ಮಹತ್ಯೆಗೆ ಶರಣಾಗಲು ಮುಂದಾದ ಮೂವರ ಜೀವ ಉಳಿಸಿದ ‘ವಾಟ್ಸ್ ಅಪ್’..!

Pinterest LinkedIn Tumblr

watsapp

ಸೇಲಂ: ಸದಾ ಜೋಕ್ಸ್, ಫೋಟೋಸ್, ಕಾಮೆಂಟ್ಸ್ ಕಳುಹಿಸಲು ಬಳಕೆಯಾಗುವ ಮೊಬೈಲ್ ‘ವಾಟ್ಸ್ ಅಪ್’ ಮೂವರ ಜೀವ ಉಳಿಸಿದ ಅಪರೂಪದ ಪ್ರಕರಣ ತಮಿಳುನಾಡಿನ ಸೆಲಂನಲ್ಲಿ ನಡೆದಿದೆ.

ವ್ಯಾಪಾರದಲ್ಲಿ ತಿವ್ರ ನಷ್ಟಕ್ಕೆ ಗುರಿಯಾಗಿದ್ದರಘುವರನ್ ಎಂಬ ವ್ಯಾಪಾರಿ, ಮುಂದೇನು ಮಾಡುವುದು ತೋಚದೆ ಮನೆಯಲ್ಲಿ ಪತ್ನಿಯ ಸಲಹೆ ಕೇಳಿದ್ದರು. ಭಾರಿ ಸಾಲದ ವಿಷಯ ತಿಳಿದು ಕಂಗಾಲಾದ ಪತ್ನಿ, ಹೊಗೇನಕಲ್ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಳ್ಳೋಣ ಎಂದು ಹೇಳಿದ್ದರು. ಆದರೆ ಇದಕ್ಕೆ ರಘುವರನ್ ವಿರೋಧಿಸಿದ್ದರು.

ಮರುದಿನ ರಘುವರನ್ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋದಾಗ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಲು ಹೊಗೇನಕಲ್‌ನತ್ತ ಹೊರಟುಬಿಟ್ಟಿದ್ದರು. ಮನೆಗೆ ಬೀಗ ಹಾಕಿರುವುದು ಕಂಡು ತಬ್ಬಿಬ್ಬಾದ ರಘುವರನ್ ಕೂಡಲೇ ಪೊಲೀಸ್ ಠಾಣೆಗೆ ಧಾವಿಸಿ ವಿಷಯ ತಿಳಿಸಿದರು. ಪೊಲೀಸರು ಹೊಗೇನಕಲ್ ಹಾಗೂ ಸುತ್ತಮುತ್ತಲ ಎಲ್ಲ ಠಾಣೆಗಳಿಗೂ ವಾಟ್ಸ್ ಆ್ಯಪ್ ಮೂಲಕ ತಾಯಿ ಮಕ್ಕಳ ಫೋಟೋ ರವಾನಿಸಿದರು. ಈ ಫೋಟೋ ನೆರವಿನಿಂದ ತಮಿಳುನಾಡು ಪೊಲೀಸರು ಹೊಗೇನಕಲ್ ಬಸ್ ನಿಲ್ದಾಣದಲ್ಲಿದ್ದ ತಾಯಿ ಮಕ್ಕಳನ್ನು ಗುರುತಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಿದ್ದಾರೆ. ಆ ಮೂಲಕ ತಂತ್ರಜ್ಞಾನದ ನೆರವಿನಿಂದ ಮೂವರ ಪ್ರಾಣ ಉಳಿಸಿದ್ದಾರೆ.

Write A Comment