ರಾಷ್ಟ್ರೀಯ

ಕಾರ್ಗಿಲ್ ವಿಜಯ ದಿನ: ವೀರಯೋಧರಿಗೆ ನಮನ ಸಲ್ಲಿಸಿದ ರಕ್ಷಣಾ ಸಚಿವ

Pinterest LinkedIn Tumblr

manohar-parikkarವೀರ ಯೋಧರಿಗೆ ಅಮರ್ ಜವಾನ್ ಜ್ಯೋತಿಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ವಾಯುಸೇನೆ, ನೌಕಾಸೇನೆ ಮತ್ತು ಭೂಸೇನೆಯ ಮುಖ್ಯಸ್ಥರು ನಮನ ಸಲ್ಲಿಸುತ್ತಿರುವ ಚಿತ್ರ (ಫೋಟೋ ಕೃಪೆ: ಎ
ನವದೆಹಲಿ: 16 ವರ್ಷಗಳ ಹಿಂದೆ ತಮ್ಮ ಜೀವವನ್ನೇ ಮುಡಿಪಾಗಿಟ್ಟ ವೀರ ಯೋಧರಿಗೆ ಅಮರ್ ಜವಾನ್ ಜ್ಯೋತಿಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ವಾಯುಸೇನೆ, ನೌಕಾಸೇನೆ ಮತ್ತು ಭೂಸೇನೆಯ ಮುಖ್ಯಸ್ಥರು ಭಾನುವಾರ ನಮನ ಸಲ್ಲಿಸಿದ್ದಾರೆ.

ಕಾರ್ಗಿಲ್ ವಿಜಯ ದಿವಸದ 16ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಅಮರ್ ಜವಾನ್ ಜ್ಯೋತಿಗೆ ಮನೋಹರ್ ಪರಿಕ್ಕರ್, ಭೂ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್, ವಾಯುಸೇನೆಯ ಮುಖ್ಯಸ್ಥ ಚೀಫ್ ಮಾರ್ಷಲ್ ಅರುಪ್ ರಾಹಾ ಹಾಗೂ ನೌಕಾದಳದ ಮುಖ್ಯಸ್ಥ ಆಡ್ಮಿರಲ್ ಆರ್.ಕೆ.ಧೋವಾನ್ ಸೇರಿದಂತೆ ರಕ್ಷಣಾ ಇಲಾಖೆಯ ಇನ್ನಿತರೆ ಉನ್ನತಾಧಿಕಾರಿಗಳು ಭೇಟಿ ನೀಡಿ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.

ಕಾರ್ಗಿಲ್ ಹುತಾತ್ಮ ಯೋಧರಿಗೆ ಕೋಟಿ ನಮನ ಸಲ್ಲಿಸಿದ ಮೋದಿ

ಕಾರ್ಗಿಲ್ ವಿಜಯ ದಿವಸ ಕುರಿತಂತೆ ಈಗಾಗಲೇ ವೀರ ಯೋಧರಿಗೆ ಶುಭಾಶಯ ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕಾರ್ಗಿಲ್ ಯುದ್ಧದ ಸಮಯದಲ್ಲಿ ಯೋಧರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. ವೀರ ಯೋಧರಿಗೆ ಸಲಾಂ ಮಾಡುತ್ತೇನೆ ಎಂದು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಮಧ್ಯೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಇತಿಹಾಸ ಪುಟ ಸೇರಿದ್ದು, ಈ ಯುದ್ಧದಲ್ಲಿ ಸೈನಿಕ ತ್ಯಾಗ ಹಾಗೂ ಬಲಿದಾನಗಳಿಗೆ ಸಾಕ್ಷಿಯಾಗಿದೆ. ಕಾರ್ಗಿಲ್ ಯುದ್ಧದಲ್ಲಿ ತಮ್ಮ ಜೀವತೆತ್ತ ಯೋಧರ ನನಗೆ ಇಂದಿಗೂ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದು, ಧೀರ ಯೋಧರರನ್ನು ಸ್ಮರಿಸಲು ಈ ಕಾರ್ಗಿಲ್ ದಿನ ಮುಡಿಪಾಗಿಡಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಅಧಿಕಾರಿಗಳು, ಸೈನಿಕರು, ಯೋಧರು ಸೇರಿದಂತೆ ಸಾಕಷ್ಟು ಮಂದಿ ಮಡಿದಿದ್ದರು. ಅಂದು ದೇಶಕ್ಕಾಗಿ ಜೀವತೆತ್ತ ಸೈನಿಕರ ಶೌರ್ಯ ಮತ್ತು ತ್ಯಾಗ ಇಂದಿಗೂ ನೆನಪಾಗುತ್ತದೆ. ಅಂತಹ ಯೋಧರಿಗೆ ಕೋಟಿ ಕೋಟಿ ನಮನ ಎಂದು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಮಧ್ಯೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವು ಆಕ್ರಿಮಿಸಿಕೊಂಡಿದ್ದ ಕಾಶ್ಮೀರವನ್ನು ಭಾರತೀಯ ಯೋಧರು ಹೋರಾಡುವ ಮೂಲಕ ಕಾಶ್ಮೀರವನ್ನು ವಶಕ್ಕೆ ಪಡೆದುಕೊಂಡಿದ್ದರು.

Write A Comment