ರಾಷ್ಟ್ರೀಯ

ಮೊಬೈಲ್ ಫೋನ್ ಬಳಕೆಯಲ್ಲಿರಲಿ ಎಚ್ಚರ

Pinterest LinkedIn Tumblr

4543attractive-woman-talking-on-phoneಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ವೇಳೆ ಅನಾಹುತಗಳಾಗುತ್ತಿವೆ. ಇದಕ್ಕೆ ಬಳಕೆಯಲ್ಲಿ ವಹಿಸುವ ನಿರ್ಲಕ್ಷ್ಯವೇ ಪ್ರಮುಖ ಕಾರಣವೆನ್ನಲಾಗಿದೆ. ಹೀಗಾಗಿ ಮೊಬೈಲ್ ಬಳಕೆ ಕುರಿತಂತೆ ತಜ್ಞರು ಕೆಲವು ಸಲಹೆ ನೀಡಿದ್ದು, ಅದರ ವಿವರ ಇಲ್ಲಿದೆ.

ಮೊಬೈಲ್ ಚಾರ್ಜ್ ಮಾಡಲು ಹಾಕಿದ ವೇಳೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬೇಡಿ.

ಜೀವನದ ಅವಿಭಾಜ್ಯ ಅಂಗವಾಗಿ ಹೋಗಿರುವ ಮೊಬೈಲ್ ಅನ್ನು ಬಹಳಷ್ಟು ಮಂದಿ ರಾತ್ರಿ ವೇಳೆ ತಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಾರೆ. ಇದನ್ನು ತಪ್ಪಿಸಿ.

ಬಿರು ಬಿಸಿಲಿರುವಾಗ, ಮಳೆ ಬರುವ ವೇಳೆ ಹಾಗೂ ಗುಡುಗು- ಮಿಂಚು ಇದ್ದರೆ ಖಂಡಿತವಾಗಿ ಮೊಬೈಲ್ ಬಳಸಬೇಡಿ.

ಪೆಟ್ರೋಲ್ ಬಂಕ್ , ಬೆಂಕಿಯ ಜ್ವಾಲೆ ಬಳಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಬೇಡ.

ಮೊಬೈಲ್ ಚಾರ್ಜ್ ಮಾಡಲು ಕಳಪೆ ಗುಣಮಟ್ಟದ ಚಾರ್ಜರ್ ಗಳನ್ನು ಖರೀದಿಸಬೇಡಿ.

ಅತ್ಯಂತ ಪ್ರಮುಖವಾದ ಸಂಗತಿಯೆಂದರೇ ಮೊಬೈಲ್ ಬ್ಯಾಟರಿ ಊದಿಕೊಂಡಿದ್ದರೆ ಅಥವಾ ಚಾರ್ಜ್ ಮಾಡಲು ಹಾಕಿದ ವೇಳೆ ಮೊಬೈಲ್ ಬಿಸಿಯಾಗುತ್ತಿದ್ದರೆ ಕೂಡಲೇ ಬ್ಯಾಟರಿ ಬದಲಾಯಿಸಿ. ಇದಕ್ಕಾಗಿ ಪ್ರಮುಖ ಕಂಪನಿಗಳ ಗುಣಮಟ್ಟದ ಬ್ಯಾಟರಿಯನ್ನೇ ಖರೀದಿಸಿ.

Write A Comment