ರಾಷ್ಟ್ರೀಯ

ಕುಣಿಯಲು ಬಿಡದ್ದಕ್ಕೆ ವರನ ತಂದೆಗೆ ಗುಂಡಿಟ್ಟು ಕೊಂದ ಅತಿಥಿ

Pinterest LinkedIn Tumblr

6271gun-shot-1ಡೆಹ್ರಾಡೂನ್: ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ರಾತ್ರಿ ಕುಡಿದು, ಕುಣಿದು ಕುಪ್ಪಳಿಸುತ್ತಿದ್ದ ವೇಳೆ ವರನ ತಂದೆ ಆಗಮಿಸಿ ಹಾಡನ್ನು ಹಾಕದಂತೆ ಡಿಜೆ ಗೆ ತಾಕೀತು ಮಾಡಿದ ವೇಳೆ ರೊಚ್ಚಿಗೆದ್ದ ಅತಿಥಿಯೊಬ್ಬ ಗುಂಡಿಟ್ಟು ಅವರನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.

ಹರಿದ್ವಾರ್ ಜಿಲ್ಲೆಯ ಸಾಕೋಟಿ ಗ್ರಾಮದಲ್ಲಿ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದ್ದು, ಇದಕ್ಕಾಗಿ ಡಿಜೆಯನ್ನೂ ಕರೆಸಲಾಗಿತ್ತು. ಆತ ಬಾಲಿವುಡ್ ಚಿತ್ರಗೀತೆಗಳನ್ನು ಹಾಕಿದ್ದು, ಕುಡಿದು ಚಿತ್ತಾಗಿದ್ದ ಅತಿಥಿಗಳು ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದರು. ತಡ ರಾತ್ರಿಯವರೆಗೂ ಪಾರ್ಟಿ ಮುಂದುವರೆದಿದ್ದ ವೇಳೆ ಅಲ್ಲಿಗೆ ಆಗಮಿಸಿದ ವರನ ತಂದೆ ಬೆಳಿಗ್ಗೆ ವಿವಾಹದ ಶಾಸ್ತ್ರಗಳು ಇರುವ ಕಾರಣ ಇಲ್ಲಿಗೆ ಪಾರ್ಟಿ ಬಂದ್ ಮಾಡುವಂತೆ ಹೇಳಿ ಡಿಜೆ ಗೆ ಹಾಡು ಹಾಕದಂತೆ ಸೂಚಿಸಿದ್ದಾರೆ.

ಇದರಿಂದ ಅಕ್ರೋಶಗೊಂಡ ಅತಿಥಿಗಳು ವರನ ತಂದೆಯ ಜೊತೆ ಜಗಳ ತೆಗೆದಿದ್ದಾರೆ. ಆಗ ವರನ ತಂದೆಯ ಬೆಂಬಲಕ್ಕೆ ಕುಟುಂಬಸ್ಥರು ಬಂದಿದ್ದು, ಈ ವೇಳೆ ಅತಿಥಿಯೊಬ್ಬ ತನ್ನ ಬಳಿಯಿದ್ದ ಪಿಸ್ತೂಲಿನಿಂದ ವರನ ತಂದೆಯ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ವರನ ಕಡೆಯವರು ಕುಡಿದು ಟೈಟಾಗಿದ್ದ ಅತಿಥಿಗಳನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

Write A Comment