ರಾಷ್ಟ್ರೀಯ

ಭಾರತದಲ್ಲಿ ಶೇ.30ರಷ್ಟು ವಕೀಲರು ನಕಲಿ: ಬಾರ್ ಕೌನ್ಸಿಲ್ ಅಧ್ಯಕ್ಷ

Pinterest LinkedIn Tumblr

mananಚೆನ್ನೈ: ಭಾರತದಲ್ಲಿ ಶೇ.30ರಷ್ಟು ವಕೀಲರು ನಕಲಿ ಕಾನೂನು ಪದವಿ ಹೊಂದಿದವರಾಗಿದ್ದಾರೆ ಎಂದು ಭಾರತದ ಬಾರ್‌ ಕೌನ್ಸಿಲ್‌ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರು ಶನಿವಾರ ಹೇಳಿದ್ದಾರೆ.

ಬಾರ್‌ ಕೌನ್ಸಿಲ್‌ ಆಯೋಜಿಸಿದ್ದ ವಕೀಲರ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಮಿಶ್ರಾ, ದೇಶದಲ್ಲಿ ಶೇ.30ರಷ್ಟು ನಕಲಿ ಕಾನೂನು ಪದವಿ ಹೊಂದಿರುವ ವಕೀಲರಿದ್ದಾರೆ ಎಂದರು. ಅಲ್ಲದೆ ವೃತ್ತಿ ನೀತಿ ಸಂಹಿತೆಯನ್ನು ಮುರಿಯುವ, ಅಶಿಸ್ತಿನ ವರ್ತನೆಯನ್ನು ತೋರುವ ಹಾಗೂ ನಕಲಿ ಕಾನೂನು ಪದವಿ ಹೊಂದಿರುವ ವಕೀಲರನ್ನು ಪತ್ತೆ ಹಚ್ಚಿ ಕಿತ್ತು ಹಾಕುವ ಪ್ರಕ್ರಿಯೆಯನ್ನು ಬಾರ್‌ ಕೌನ್ಸಿಲ್‌ ಕೈಗೊಂಡಿರುವುದಾಗಿ ತಿಳಿಸಿದರು.

ಬಾರ್‌ ಕೌನ್ಸಿಲ್‌ನ ಒಂದು ಅಂದಾಜಿನ ಪ್ರಕಾರ ಶೇ.30ರಷ್ಟು ವಕೀಲರು ಭಾರತೀಯ ನ್ಯಾಯಾಲಯಗಳಲ್ಲಿ ನಕಲಿ ಕಾನೂನು ಪದವಿ ಆಧಾರದಲ್ಲಿ ವಕೀಲ ವೃತ್ತಿಯಲ್ಲಿ ನಿರತರಾಗಿದ್ದಾರೆ. ದಿಲ್ಲಿ ಕಾನೂನು ಸಚಿವರಾಗಿದ್ದ ವ್ಯಕ್ತಿಯೇ ನಕಲಿ ಕಾನೂನು ಪದವಿ ಹೊಂದಿರುವುದು ಈಚೆಗೆ ಬಹಿರಂಗವಾಗಿರುವ ವಿಷಯವಾಗಿದೆ ಎಂದು ಮನನ್‌ ಕುಮಾರ್‌ ಮಿಶ್ರಾ ಹೇಳಿದರು.

ನಕಲಿ ಕಾನೂನು ಪದವಿ ಪಡೆದಿರುವ ವಕೀಲರು ಇಂದು ವಕೀಲ ವೃತ್ತಿಯ ಘನತೆ – ಗೌರವಗಳಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ನಕಲಿ ಕಾನೂನು ಪದವಿ ಹೊಂದಿರುವ ನಕಲಿ ವಕೀಲರನ್ನು ಕಾನೂನು ಸೇವಾ ಕ್ಷೇತ್ರದಿಂದ ಕಿತ್ತು ಹಾಕುವ ಕೆಲಸ ಈಗ ನಡೆಯುತ್ತಿದೆ ಎಂದು ಮಿಶ್ರಾ ತಿಳಿಸಿದರು.

Write A Comment