ರಾಷ್ಟ್ರೀಯ

ನೆನಪುಗಳ ಮಾತು ಮಧುರ… ಈಗ ಗೂಗಲ್ ಸರದಿ

Pinterest LinkedIn Tumblr

googleನವದೆಹಲಿ: ನಿಮ್ಮ ಅಮರ, ಮಧುರ ನೆನಪುಗಳನ್ನು ನಿಮ್ಮದೇ ಬೆರಳ ತುದಿಯಲ್ಲೇ ಮೂಡಿಸಲು ಇದೀಗ ಗೂಗಲ್ ಮ್ಯಾಪ್ಸ್ ಮುಂದಾಗಿದೆ.

ಮ್ಯಾಪ್ಸ್ ಮತ್ತು ಅರ್ಥ್ ಸೌಲಭ್ಯಗಳ ಮೂಲಕ ಭೂಮಿಯ ಮೂಲೆ- ಮೂಲೆಯನ್ನು ತನ್ನ ಬಳಕೆದಾರರ ಅಂಗೈ ಮೇಲೆಯೇ ಅನಾವರಣಗೊಳಿಸಿರುವ ಗೂಗಲ್ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ‘ಯುವರ್ ಟೈಮ್ ಲೈನ್’ ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಿದೆ.  ಫೇಸ್‍ಬುಕ್ ಟೈಮ್ ಲೈನ್ ಮಾದರಿಯಲ್ಲಿ ಬಳಕೆದಾರ ತಾನು ಭೇಟಿ ನೀಡಿದ ಸ್ಥಳಗಳನ್ನು ಚಿತ್ರಸಹಿತ ಮತ್ತೆ-ಮತ್ತೆ ನೋಡುವ, ಆ ಮೂಲಕ ಹಳೆಯ ಪ್ರವಾಸ, ಇಷ್ಟದ ಮನೆ, ಊರುಗಳ ನೆನಪನ್ನು ಹಸಿರಾಗಿರಿಸಿಕೊಳ್ಳುವ ವಿಶೇಷ ಸೌಲಭ್ಯ ಯುವರ್ ಟೈಮ್ ಲೈನ್‍ನ ವೈಶಿಷ್ಟ್ಯ.

ಗೂಗಲ್ ಮ್ಯಾಪ್ಸ್ ತೆರೆದುಕೊಳ್ಳುತ್ತಲೇ ನಿಮ್ಮ ಇತ್ತೀ ಚಿನ ಟೈಮ್ ಲೈನ್ ಕೂಡ ನಕಾಶೆಯ ಮೇಲೆ ಮೂಡುತ್ತದೆ. ರಸ್ತೆ ಮಾರ್ಗಸೂಚಿಯಂತೆ ನೀವು ಭೇಟಿನೀಡಿದ ಸ್ಥಳಸೂಚಿ ಕಾಣಿಸಿಕೊಳ್ಳುತ್ತದೆ. ನೀವು  ಯಾವುದಾದರೂ ಸ್ಥಳ, ಮಾರ್ಗ, ಚಿತ್ರವನ್ನು ಟೈಮ್ ಲೈನಿನಿಂದ ತೆಗೆಯಬೇಕೆಸಿದರೆ ಆ ಅವಕಾಶ ಕೂಡ ಇದೆ. ಸದ್ಯಕ್ಕೆ ಇದು ಡೆಸ್ಕ್ ಟಾಪ್, ಆಂಡ್ರಾಯ್ಡ್ ಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರ ಗ್ಯಾಜೆಟ್ ಗಳಿಗೂ ವಿಸ್ತರಿಸಲಾಗುವುದು ಎಂದು ಗೂಗಲ್ ತಿಳಿಸಿದೆ. ಆದರೆ, ನೆನಪಿಡಿ, ನೀವು ಗೂಗಲ್ ಮ್ಯಾಪ್ಸ್ ನಲ್ಲಿ ನಿಮ್ಮ ಟೈಮ್ ಲೈನ್ ಉಳಿಸುವ ಆಯ್ಕೆ ಕ್ಲಿಕ್ ಮಾಡಿದ್ದರೆ ಮಾತ್ರ ಈ ಸೌಲಭ್ಯ ದೊರೆಯಲಿದೆ!

Write A Comment