ರಾಷ್ಟ್ರೀಯ

ಶಾಕಿಂಗ್: ಈ ಲೇಡಿ ಡಾನ್ ಪ್ರತಾಪವನ್ನು ನೀವೇ ನೋಡಿ

Pinterest LinkedIn Tumblr

2919phxpw4gahbfgf_smallಬಿಜನೂರ್: ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಚಟುವಟಿಕೆ ಮಿತಿ ಮೀರಿದೆ ಎಂಬ ಆರೋಪ ಹೊಸದೇನೂ ಅಲ್ಲ. ಕೆಲ ದಿನಗಳ ಹಿಂದಷ್ಟೇ ಭೂಗತ ಪಾತಕಿಯ ಸಹೋದರನೊಬ್ಬ ಉದ್ಯಮಿ ತಲೆ ಮೇಲೆ ಬಾಟಲ್ ಇಟ್ಟು ಗುಂಡು ಹಾರಿಸಿ ಬೆದರಿಸಿದ್ದರೆ, ಈಗ ಈ ಲೇಡಿ ಡಾನ್ ಒಬ್ಬಳು ಮತ್ತೊಂದು ಸಾಹಸ ಮಾಡಿದ್ದಾಳೆ.

ಭೂ ಮಾಫಿಯಾಕ್ಕೆ ಸೇರಿದವಳೆನ್ನಲಾದ ಮಮತಾ ಅಗರ್ವಾಲ್ ಎಂಬ ಈ ಮಹಿಳೆ ಸ್ವತಃ ತಾನೇ ಟ್ರಾಕ್ಟರ್ ಚಲಾಯಿಸಿಕೊಂಡು ಬಂದು ಜಾಗವೊಂದನ್ನು ತೆರವುಗೊಳಿಸಲು ಮುಂದಾಗಿದ್ದಾಳೆ. ತನ್ನ ಸೊಂಟಕ್ಕೆ ರಿವಾಲ್ವರ್ ಸಿಗಿಸಿಕೊಂಡಿದ್ದ ಆಕೆ, ಸ್ಥಳೀಯರು ವಿರೋಧ ಮಾಡಿದರೂ ಕ್ಯಾರೇ ಎನ್ನದೇ ತನ್ನ ಕಾರ್ಯ ಮಾಡಿದ್ದಾಳೆ. ಈಕೆಯನ್ನು ತಡೆಯಲು ಕೆಲ ಮಹಿಳೆಯರು ಮುಂದಾದ ವೇಳೆ ಅವರುಗಳ ಮೇಲೆಯೇ ಟ್ರಾಕ್ಟರ್ ಚಲಾಯಿಸಿದ್ದಾಳೆ.

ಈ ಸಂದರ್ಭದಲ್ಲಿ ಯುವತಿಯೊಬ್ಬಳು ತೀವ್ರವಾಗಿ ಗಾಯಗೊಂಡಿದ್ದು, ಮಮತಾ ಅಗರ್ವಾಲ್ ತನ್ನ ಧ್ವಂಸ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ರಾಜ ಮರ್ಯಾದೆ ನೀಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ಅಧಿಕಾರಿಯ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗುವ ವೇಳೆ ಅಧಿಕಾರಿ ಕುಳಿತುಕೊಳ್ಳುವ ಸೀಟನ್ನೇ ಆಕೆಗೆ ಬಿಟ್ಟುಕೊಟ್ಟು ಕರ್ತವ್ಯ ನಿಷ್ಟೆ(?) ಮೆರೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ‘ಕನ್ನಡ ದುನಿಯಾ’ ದ ವಿಡಿಯೋ ವಿಭಾಗದಲ್ಲೂ ಇದನ್ನು ನೋಡಬಹುದು.

Write A Comment